ಗುರುವಾರ , ಏಪ್ರಿಲ್ 9, 2020
19 °C

ಐಒಸಿಯವರೇ ಜೋಕ್ ಮಾಡ್ತಿದ್ದೀರಾ: ಕಶ್ಯಪ್ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ತರಬೇತಿಯನ್ನು ಮುಂದುವರಿಸಿ ಎಂದು ಕ್ರೀಡಾಪಟುಗಳಿಗೆ ಹೇಳುತ್ತಿರುವ ಐಒಸಿ ಜೋಕ್ ಮಾಡುತ್ತಿದೆಯೇ?’ ಎಂದು ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ತರಬೇತಿ ಕೇಂದ್ರಗಳು, ಕ್ರೀಡಾಂಗಣಗಳ ಬಾಗಿಲುಗಳು ಮುಚ್ಚಿವೆ. ಆದರೆ ಗುರುವಾರ ಹೇಳಿಕೆ ನೀಡಿರುವ ಐಒಸಿಯು, ನಿಗದಿತ ಸಮದಯಲ್ಲೇ ಒಲಿಂಪಿಕ್ಸ್ ನಡೆಯಲಿದೆ. ತರಬೇತಿಯನ್ನು ಮುಂದುವರಿಸಿ ಎಂದಿದೆ.

ಇದರಿಂದ ಕೆರಳಿರುವ ಕಶ್ಯಪ್, ‘ಮೊದಲನೇಯದಾಗಿ ಮುಂಬರುವ ಒಲಿಂಪಿಕ್ಸ್‌ಗೆ ತಂಡವನ್ನು ಆಯ್ಕೆ ಮಾಡಿಲ್ಲ. ಆಯ್ಕೆ ಪ್ರಕ್ರಿಯೆಗಳೂ ಪೂರ್ಣವಾಗಿಲ್ಲ. ಈಗಾಗಲೇ ಆಯ್ಕೆಯಾದವರಿಗ ಅಭ್ಯಾಸ ಮಾಡಲು ಸ್ಥಳವೆಲ್ಲಿದೆ? ಎಲ್ಲ ಅಕಾಡೆಮಿಗಳಿಗೂ ಬೀಗ ಹಾಕಲಾಗಿದೆ. ಇಂತಹ ಸಂದರ್ಭದಲ್ಲಿ ಐಒಸಿಯು ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಅವರು ಈಚೆಗೆ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು. ಅಲ್ಲಿಂದ ಮರಳಿದ ನಂತರ ಕ್ವಾರಂಟೈನ್‌ಗೆ (ಏಕಾಂತವಾಸ) ಒಳಪಟ್ಟಿದ್ದಾರೆ. ಮನೆಯಲ್ಲಿ  ಆರೈಕೆಯಲ್ಲಿದ್ದಾರೆ.

ಕೊರೊನಾ ಭೀತಿಯ ನಡುವೆಯೂ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ನಡೆಸಿದ್ದನ್ನು ಕಶ್ಯಪ್ ಪತ್ನಿ ಮತ್ತು ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರ ಖಂಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು