ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀರಾಬಾಯಿಯನ್ನು ಅಮೆರಿಕಕ್ಕೆ ಕಳುಹಿಸಿ ತರಬೇತಿ ಕೊಡಿಸಿದ್ದ ಮೋದಿ: ಮಣಿಪುರ ಸಿಎಂ

Last Updated 6 ಆಗಸ್ಟ್ 2021, 8:19 IST
ಅಕ್ಷರ ಗಾತ್ರ

ದೆಹಲಿ: ಅಮೆರಿಕದಲ್ಲಿ ಉತ್ತಮ ವೈದ್ಯಕೀಯ ಆರೈಕೆ ಮತ್ತು ತರಬೇತಿ ಪಡೆಯಲು ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಮತ್ತು ಮತ್ತೊಬ್ಬ ಒಲಿಂಪಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಮುಂಚಿತವಾಗಿಯೇ ನೆರವಾಗಿದ್ದರು ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಬಿರೇನ್‌ ಸಿಂಗ್‌, ‘ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಪ್ರಧಾನಿ ಮೋದಿ ನೀಡಿದ ಸಹಾಯದ ಬಗ್ಗೆ ತಿಳಿದು ನನಗೆ ಆಶ್ಚರ್ಯವಾಯಿತು. ಆಕೆಯ ವೈದ್ಯಕೀಯ ವೆಚ್ಚ, ತರಬೇತಿ, ಅಗತ್ಯಗಳನ್ನು ನೋಡಿಕೊಳ್ಳಲು ಪಿಎಂ ಮೋದಿ ನೆರವಾಗಿದ್ದಾರೆ. ಆಕೆಯನ್ನು ಅಮೆರಿಕಕ್ಕೆ ಕಳುಹಿಸಿ ತರಬೇತಿ ಕೊಡಿಸಿದ್ದಾರೆ. ಈ ಬಗ್ಗೆ ಸ್ವತಃ ಮೀರಾಬಾಯಿ ಚಾನು ಅವರೇ ನನಗೆ ಹೇಳಿದ್ದರು,‘ ಎಂದಿದ್ದಾರೆ.

‘ ಅಮೆರಿಕಕ್ಕೆ ಹೋಗಲು ಮೀರಾಬಾಯಿಗೆ ಮೋದಿ ನೆರವಾಗದೇ ಹೋಗಿದ್ದಿದ್ದರೆ, ಆಕೆಯಿಂದ ಒಲಿಂಪಿಕ್ಸ್‌ನಲ್ಲಿ ಸಾಧನೆ ಸಾಧ್ಯವಾಗುತ್ತಿರಲಿಲ್ಲ‘ ಎಂದು ಸಿಂಗ್ ಹೇಳಿದ್ದಾರೆ.

‘ಚಾನು ಬೆನ್ನು ನೋವಿನ ಬಗ್ಗೆ ತಿಳಿದ ಕೂಡಲೇ ಮೋದಿ ಮಧ್ಯಪ್ರವೇಶ ಮಾಡಿದರು. ಆಕೆಯ ವೆಚ್ಚಗಳನ್ನು ಕೇಂದ್ರವು ಭರಿಸಿದೆ. ಕೇವಲ ಆಕೆಗೆ ಮಾತ್ರ ಮೋದಿ ಸಹಾಯ ಮಾಡಿಲ್ಲ. ಮತ್ತೊಬ್ಬ ಕ್ರೀಡಾಪಟುವಿಗೂ ಮೋದಿ ನೆರವಾಗಿದ್ದಾರೆ. ಆದರೆ, ಅವರ ಹೆಸರನ್ನು ನಾನು ಬಹಿರಂಗಗೊಳಿಸುವುದಿಲ್ಲ. ಪ್ರಧಾನಿ ಮಧ್ಯಪ್ರವೇಶದ ನಂತರ ಅವರನ್ನು ವೈದ್ಯಕೀಯ ಆರೈಕೆ, ತರಬೇತಿಗಾಗಿ ಅಮೆರಿಕಕ್ಕೆ ಕಳುಹಿಸಲಾಗಿದೆ,‘ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT