ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಸೆ ಮರೆಯುವ ತವಕದಲ್ಲಿ ಸೈನಾ, ಸಿಂಧು

ಟೊಯೊಟಾ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ
Last Updated 18 ಜನವರಿ 2021, 13:47 IST
ಅಕ್ಷರ ಗಾತ್ರ

ಬ್ಯಾಂಕಾಂಕ್‌: ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಸೇರಿದಂತೆ ಭಾರತದ ಬ್ಯಾಡ್ಮಿಂಟನ್ ಪಟುಗಳು ಮಂಗಳವಾರ ಇಲ್ಲಿ ಆರಂಭವಾಗುವ ಟೊಯೊಟಾ ಥಾಯ್ಲೆಂಡ್ ಓಪನ್‌ ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಯೋನೆಕ್ಸ್ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಅನುಭವಿಸಿದ ನಿರಾಸೆಯನ್ನು ಮರೆಯುವ ತವಕದಲ್ಲಿದ್ದಾರೆ.

ಯೋನೆಕ್ಸ್ ಓಪನ್ ಟೂರ್ನಿಯಲ್ಲಿ ಫಿಟ್‌ನೆಸ್‌ ಸಮಸ್ಯೆಯಿಂದ ಪರದಾಡಿದ್ದ ಭಾರತದ ಆಟಗಾರರಿಗೆ ಎರಡನೇ ಸುತ್ತಿನ ತಡೆಯನ್ನೂ ದಾಟಲು ಸಾಧ್ಯವಾಗಿರಲಿಲ್ಲ. ಸಿಂಧು ಮೊದಲ ಸುತ್ತಿನಲ್ಲೇ ಸೋತರೆ, ಸೈನಾ ಎರಡನೇ ಸುತ್ತಿನಲ್ಲಿ ಪರಾಭವ ಕಂಡಿದ್ದರು.

ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಸಿಂಧು ಅವರಿಗೆ ಥಾಯ್ಲೆಂಡ್‌ನ ಬುಸಾನನ್‌ ಒಂಗ್‌ಬಮ್ರುಂಗ್‌ಪನ್ ಸವಾಲು ಎದುರಾಗಿದೆ. ವಿಶ್ವದ 12ನೇ ಕ್ರಮಾಂಕದ ಆಟಗಾರ್ತಿ ಬುಸಾನನ್ ಕಳೆದ ಟೂರ್ನಿಯಲ್ಲಿ ಸೈನಾ ಅವರಿಗೆ ಸೋಲುಣಿಸಿದ್ದರು.

ವಿಶ್ವ ಕ್ರಮಾಂಕದಲ್ಲಿ ಸದ್ಯ 20ನೇ ಸ್ಥಾನದಲ್ಲಿರುವ ಸೈನಾ ಅವರು ಮೊದಲ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ರಚನೊಕ್ ಇಂತನನ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಇಂತನನ್ ವಿರುದ್ಧ ಸೈನಾ 11–5 ಜಯದ ದಾಖಲೆ ಹೊಂದಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್‌, ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್‌, ಪರುಪಳ್ಳಿ ಕಶ್ಯಪ್‌, ಎಚ್‌.ಎಸ್‌.ಪ‍್ರಣಯ್‌, ವರ್ಮಾ ಸಹೋದರರಾದ ಸಮೀರ್ ಮತ್ತು ಸೌರಭ್‌ ಕಣಕ್ಕಿಳಿಯಲಿದ್ದಾರೆ.

ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ, ಮನು ಅತ್ರಿ–ಬಿ.ಸುಮೀತ್‌ ರೆಡ್ಡಿ ಡಬಲ್ಸ್ ವಿಭಾಗದಲ್ಲಿ ಆಡಲಿದ್ದರೆ, ಮಿಶ್ರ ಡಬಲ್ಸ್‌ನಲ್ಲಿ ಚಿರಾಗ್‌–ಅಶ್ವಿನಿ ಪೊನ್ನಪ್ಪ ಅದೃಷ್ಟ ಪರೀಕ್ಷಿಸಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ–ಎನ್.ಸಿಕ್ಕಿರೆಡ್ಡಿ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT