ಗುರುವಾರ , ಆಗಸ್ಟ್ 11, 2022
21 °C
ಇಂದಿನಿಂದ ದಕ್ಷಿಣ ವಲಯ ಟೂರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌

ಅಕ್ಷಯ್‌ ನಿರಂಜನ್ ಮೇಲೆ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರ್‌ಬಿಜಿ ದಕ್ಷಿಣ ವಲಯ ಗಾಲ್ಫ್ ಟೂರ್ ಚಾಂಪಿಯನ್‌ಷಿಪ್‌ ಬುಧವಾರದಿಂದ ಇಲ್ಲಿನ ಈಗಲ್ಟನ್‌ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆಯಲಿದೆ. ಅಮೆಚೂರ್ ವಿಭಾಗದಲ್ಲಿ ಬೆಂಗಳೂರಿನ ಅಕ್ಷಯ್‌ ನಿರಂಜನ್‌ ಅವರು ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಟೂರ್ನಿಯು ಚಾಂಪಿಯನ್ಸ್ ಗಾಲ್ಫ್‌ ಡೆವಲಪ್‌ಮೆಂಟ್‌ನ ಮೂರನೇ ಲೆಗ್‌ ಆಗಿದ್ದು, ಆಟಗಾರರಿಗೆ ವಿಶ್ವ ಗಾಲ್ಫ್‌ ರ‍್ಯಾಂಕಿಂಗ್ ಪಾಯಿಂಟ್ಸ್ ಗಳಿಸುವ ಅವಕಾಶವಿದೆ.

ಮೂರು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಮುಂಬೈನ ಐದು, ಹೈದರಾಬಾದ್‌ನ ಮೂರು, ಚಂಡೀಗಡ, ಪುಣೆ ಹಾಗೂ ವಿಶಾಖಪಟ್ಟಣದ ತಲಾ ಒಬ್ಬ ಆಟಗಾರರು ಸ್ಪರ್ಧಿಸಲಿದ್ದಾರೆ.

ಟೀನ್‌ ಬಾಯ್ಸ್ ‘ಬಿ’ ವಿಭಾಗದಲ್ಲಿ ಹೈದರಾಬಾದ್‌ನ ವಿಶೇಷ್ ಶರ್ಮಾ ಹಾಗೂ ಸ್ಥಳೀಯ ಪ್ರತಿಭೆ ಕೃಷ್ಣ ಪುಂಜಕರಣ್‌ ನಡುವೆ ಸ್ಪರ್ಧೆ ನಿರೀಕ್ಷಿಸಲಾಗಿದೆ. ಬಾಲಕಿಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆಯಲು ಬೆಂಗಳೂರಿನ ಸಾನ್ವಿ ಸೋಮು ಪ್ರಯತ್ನ ನಡೆಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು