ಬುಧವಾರ, ಜನವರಿ 19, 2022
26 °C

ಟಾಟಾ ಮೋಟರ್ಸ್–ಕುಸ್ತಿ ಫೆಡರೇಷನ್ ಒಪ‍್ಪ‍ಂದ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದ ಕುಸ್ತಿಗೆ ಪ್ರಧಾನ ಪ್ರಾಯೋಜಕ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್‌, ಭಾರತ ಕುಸ್ತಿ ಫೆಡರೇಷನ್‌ ನೊಂದಿಗಿನ (ಡಬ್ಲ್ಯು ಎಫ್‌ಐ) ಒಪ್ಪಂದವನ್ನು 2024ರವರೆಗೆ ವಿಸ್ತರಿಸಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟುಗಳು ಚಿನ್ನ ಗೆಲ್ಲಬೇಕೆಂಬ ಗುರಿಯೊಂದಿಗೆ ತಾನು ಫೆಡರೇಷನ್‌ ನೊಂದಿಗೆ ಮುಂದುವರಿಯುತ್ತಿರುವುದಾಗಿ ಟಾಟಾ ಮೋಟರ್ಸ್ ಪ್ರಕಟಿಸಿದೆ.

ಜೂನಿಯರ್‌ ವಿಭಾಗದ 60 ಮಂದಿಗೆ ಶಿಷ್ಯವೇತನ ಹಾಗೂ ಡಬ್ಲ್ಯುಎಫ್‌ಐ ಗುರುತಿಸುವ 30 ಮಂದಿ ಪ್ರತಿಭಾವಂತ ಕುಸ್ತಿಪಟುಗಳನ್ನು ದತ್ತು ತೆಗೆದುಕೊಳ್ಳುವುದಾಗಿಯೂ ಶುಕ್ರವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಟಾಟಾ ಮೋಟರ್ಸ್ ಘೋಷಿಸಿತು. 2018ರ ಜುಲೈ 1ರಂದು ಟಾಟಾ ಮೋಟರ್ಸ್‌ ಮತ್ತು ಡಬ್ಲ್ಯುಎಫ್‌ಐ ಒಪ್ಪಂದ ಮಾಡಿಕೊಂಡಿದ್ದವು.

ಜೂನಿಯರ್‌ ಪಟುಗಳ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ರಮದಡಿ ಅವರ ತರಬೇತಿ, ವಿದೇಶಿ ಟೂರ್ನಿಗೆ ಸಹಾಯ ಮತ್ತು ಗಾಯ ನಿರ್ವಹಣೆಗೆ ಫಿಸಿಯೊಗಳ ನೆರವು ಒದಗಿಸಲಾಗುತ್ತದೆ.

ಡಬ್ಲ್ಯುಎಫ್‌ಐ ಕಾಲಕಾಲಕ್ಕೆ ಜೂನಿಯರ್ ಕುಸ್ತಿಪಟುಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಿದೆ.

‘ನಾವು ಎಲೀಟ್‌ ಕುಸ್ತಿಪಟುಗಳಿಗೆ ಮಾತ್ರ ಹೆಚ್ಚಿನ ನೆರವು ನೀಡುತ್ತಿದ್ದೆವು. ಟಾಟಾ ಮೋಟರ್ಸ್‌ನಿಂದಾಗಿ ಗ್ರಾಮೀಣ ಭಾಗಗಳಿಂದಲೂ ಕುಸ್ತಿಪಟುಗಳು ಮುನ್ನೆಲೆಗೆ ಬರುತ್ತಿದ್ದಾರೆ‘ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್ ನುಡಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ರವಿ ದಹಿಯಾ, ದೀಪಕ್ ಪೂನಿಯಾ, ಸೋನಂ ಮಲಿಕ್‌, ಅನ್ಶು ಮಲಿಕ್‌, ವಿನೇಶಾ ಪೋಗಟ್‌ ಮತ್ತು ಸೀಮಾ ಬಿಸ್ಲಾ ಅವರಿಗೆ ಟಾಟಾ ಮೋಟರ್ಸ್‌ನಿಂದ ಕಾರು ಕೀಗಳನ್ನು ಹಸ್ತಾಂತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು