ಭಾನುವಾರ, ಸೆಪ್ಟೆಂಬರ್ 19, 2021
24 °C

Tokyo Olympics: ರಷ್ಯಾ ಈಜುಪಟುಗಳ ಕಲೆಗೆ ಒಲಿದ ಚಿನ್ನ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಸ್ವೆಟ್ಲಾನಾ ರೊಮಾಶಿನಾ ಅವರು ಒಲಿಂಪಿಕ್ಸ್‌ನಲ್ಲಿ ಏಳನೇ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಅವರಿದ್ದ ರಷ್ಯಾದ ಈಜುಗಾರ್ತಿಯರ ತಂಡವು ಆರ್ಟಿಸ್ಟಿಕ್ ಈಜು ವಿಭಾಗದ ಫ್ರೀ ರೂಟೀನ್‌ ವಿಭಾಗದಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ಶನಿವಾರ ನಡೆದ ಫೈನಲ್‌ನಲ್ಲಿ ರಷ್ಯಾ ಒಟ್ಟು 196.079 ಪಾಯಿಂಟ್ಸ್ ಕಲೆಹಾಕಿನ ಚಿನ್ನಕ್ಕೆ ಮುತ್ತಿಟ್ಟಿತು. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚೀನಾ ತಂಡವು (193.5310 ಪಾಯಿಂಟ್ಸ್) ತನ್ನ ಪದಕ ಉಳಿಸಿಕೊಂಡಿತು. ಕಂಚಿನ ಪದಕವು ಉಕ್ರೇನ್ ತಂಡದ ಪಾಲಾಯಿತು. ಆ ತಂಡವು 190.3018 ಪಾಯಿಂಟ್ಸ್ ಸಂಗ್ರಹಿಸಿತು.

ಈ ಒಲಿಂಪಿಕ್ಸ್‌ನಲ್ಲಿ ರಷ್ಯಾಕ್ಕೆ ಆರ್ಟಿಸ್ಟಿಕ್ ಈಜು ವಿಭಾಗದಲ್ಲಿ ಒಲಿದ ಆರನೇ ಚಿನ್ನದ ಪದಕ ಇದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು