ಭಾನುವಾರ, ಸೆಪ್ಟೆಂಬರ್ 19, 2021
24 °C

Tokyo Olympics ಆರ್ಚರಿ: ಬರಿಗೈಯಲ್ಲಿ ಮರಳಿದ ಭಾರತದ ಬಿಲ್ಲುಗಾರರು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಭಾರತದ ಕೊನೆಯ ಭರವಸೆಯಾಗಿದ್ದ ಆರ್ಚರಿಪಟು ಅತನು ದಾಸ್ ಪರಾಭವಗೊಳ್ಳುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಆರ್ಚರಿ ವಿಭಾಗದಲ್ಲಿ ದೇಶದ ಬಿಲ್ಲುಗಾರರು ಬರಿಗೈಯಲ್ಲಿ ಮರಳಿದ್ದಾರೆ.

ಪುರುಷರ ವೈಯಕ್ತಿಕ ವಿಭಾಗದ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಅತನು ದಾಸ್, ಸ್ಥಳೀಯ ಫೇವರಿಟ್ ತಕಹರು ಫುರುಕಾವ ವಿರುದ್ಧ 6-4ರ ಅಂತರದಿಂದ ಸೋಲು ಅನುಭವಿಸಿದರು.

ಇದನ್ನೂ ಓದಿ: 

 

 

 

1/32ರ ಎಲಿಮಿನೇಷನ್ ಸುತ್ತಿನಲ್ಲಿ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಆರ್ಚರಿಪಟು ಜಿನ್ ಹಿಯೆಕ್ ವಿರುದ್ಧ ಗೆಲುವು ದಾಖಲಿಸಿದ ಅತನು ದಾಸ್ ಅವರಿಗೆ ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

 

ಅತನು ದಾಸ್ ಅವರ ಪತ್ನಿ ದೀಪಿಕಾ ಕುಮಾರಿ ಅವರಿಗೂ ಮೂರನೇ ಬಾರಿಯೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಆಸೆ ಕೈಗೂಡಲಿಲ್ಲ. ವಿಶ್ವದ ಅಗ್ರ ಶ್ರೇಯಾಂಕಿತೆ ಆಗಿರುವ ಹೊರತಾಗಿಯೂ ಕ್ವಾರ್ಟರ್ ಫೈನಲ್ ಹಂತದಿಂದಲೇ ಹೊರಬಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು