ಶನಿವಾರ, ಸೆಪ್ಟೆಂಬರ್ 25, 2021
22 °C

Tokyo Olympics-Hockey| ಸೆಮಿಫೈನಲ್‌ನಲ್ಲಿ ಎಡವಿದ ಭಾರತದ ಹಾಕಿ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ: ಒಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬೆಲ್ಜಿಯಂ ವಿರುದ್ಧ 2–5 ಅಂತರದಲ್ಲಿ ಸೋಲು ಕಂಡಿದೆ. 

ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ ಹಾಕಿ ತಂಡ ಪಂದ್ಯದಲ್ಲಿ ಎರಡು ಗೋಲು ಬಾರಿಸಲಷ್ಟೇ ಶಕ್ತವಾಯಿತು. ಪೆನಾಲ್ಟಿ ಕಾರ್ನರ್‌, ಸ್ಟ್ರೋಕ್‌ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಬೆಲ್ಜಿಯಂ ತಂಡ ಗೆಲುವು ದಾಖಲಿಸಿತು.

ಈ ಮೂಲಕ ಫೈನಲ್‌ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ.  

ಪಂದ್ಯದಲ್ಲಿ ಮೊದಲು ಗೋಲು ಹೊಡೆದದ್ದು ಬೆಲ್ಜಿಯಂ. ನಂತರ ಭಾರತ ತನ್ನ ಮೊದಲ ಗೋಲು ಬಾರಿಸಿತು. ಮೂರನೇ ಕ್ವಾರ್ಟರ್‌ ವರೆಗೆ ಪಂದ್ಯ 2–2ರಿಂದ ಸಮಬಲದಿಂದ ಕೂಡಿತ್ತು. 

ಅಂತಿಮ 15 ನಿಮಿಷಗಳಲ್ಲಿ ಬೆಲ್ಜಿಯಂ ಒಂದು ಪೆನಾಲ್ಟಿ ಕಾರ್ನರ್‌ ಮತ್ತು ಪೆನಾಲ್ಟಿ ಸ್ಟ್ರೋಕ್‌ ಸೇರಿದಂತೆ ಒಟ್ಟು ಮೂರು  ಗೋಲು ಭಾರಿಸುವಲ್ಲಿ ಸಫಲವಾಯಿತು. ಈ ಮೂಲಕ ಅಂತಿಮ ಸುತ್ತಿನಲ್ಲಿ ಮಹತ್ವದ ಜಿಗಿತ ಸಾಧಿಸಿತು. 

ಅಂತಿಮವಾಗಿ ಭಾರತ 2–5 ಅಂತರದಲ್ಲಿ ಸೋಲು ಅನುಭವಿಸಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು