ಶನಿವಾರ, ಜೂನ್ 6, 2020
27 °C
ನಾಲ್ಕು ಬಾರಿ ಗ್ರ್ಯಾನ್‌ಸ್ಲಾಮ್‌ ಕಿರೀಟ ಧರಿಸಿದ್ದ‌ ಆಟಗಾರ

ಟೆನಿಸ್‌ ದಂತಕತೆ ಆ್ಯಶ್ಲೆ ಕೂಪರ್‌ ನಿಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಬೇನ್‌: ಆಸ್ಟ್ರೇಲಿಯಾ‌, ವಿಂಬಲ್ಡನ್‌ ಹಾಗೂ ಅಮೆರಿಕ ಚಾಂಪಿಯನ್‌ಷಿಪ್ಸ್‌ ಸೇರಿದಂತೆ ನಾಲ್ಕು ಬಾರಿ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ್ದ ಟೆನಿಸ್‌ ದಂತಕತೆ ಆ್ಯಶ್ಲೆ ಕೂಪರ್(83) ಶುಕ್ರವಾರ ನಿಧನರಾದರು.ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ ಅಗ್ರ ಪಟ್ಟ ಅಲಂಕರಿಸಿದ್ದ ಕೂಪರ್‌ ನಿಧನವನ್ನು ಟೆನಿಸ್‌ ಆಸ್ಟ್ರೇಲಿಯಾ ಖಚಿತಪಡಿಸಿದೆ. ಎರಡು ಬಾರಿ ಆಸ್ಟ್ರೇಲಿಯಾ ಓಪನ್‌ (1957, 58), ವಿಂಬಲ್ಡನ್‌ ಹಾಗೂ ಅಮೆರಿಕ ಓಪನ್‌ (ಎರಡೂ 1958ರಲ್ಲಿ) ಸಿಂಗಲ್ಸ್‌ ಪ್ರಶಸ್ತಿಗಳು ಅವರ ಮುಡಿಗೇರಿದ್ದವು. ಡಬಲ್ಸ್‌ನಲ್ಲಿಯೂ ನಾಲ್ಕು ಬಾರಿ ಅವರು ಚಾಂಪಿಯನ್‌ ಆಗಿದ್ದರು.

ಕೂಪರ್‌ ನೇತೃತ್ವದ ಆಸ್ಟ್ರೇಲಿಯಾ ತಂಡವು 1957ರಲ್ಲಿ ಅಮೆರಿಕ ತಂಡವನ್ನು ಮಣಿಸಿ ಡೇವಿಸ್‌‌ ಕಪ್‌ ಗೆದ್ದುಕೊಂಡಿತ್ತು. ಮರುವರ್ಷವೇ ಇದಕ್ಕೆ ವ್ಯತಿರಿಕ್ತ ಫಲಿತಾಂಶ ಹೊರಹೊಮ್ಮಿತ್ತು. ಇದರಿಂದ ಕೂಪರ್ ಬಹಳ ನೊಂದುಕೊಂಡಿದ್ದರು. ತನ್ನಿಂದಲೇ ಹೀಗಾಯಿತೆಂದು ಭಾವಿಸಿದ್ದ ಅವರು ವೃತ್ತಿಪರ ಟೆನಿಸ್‌ನಿಂದ ಹಿಂದೆ ಸರಿಯಬೇಕು ಎಂದುಕೊಂಡಿದ್ದರು.

ಆದರೆ 1959ರಲ್ಲೇ ಅವರು ಟೆನಿಸ್‌ ತೊರೆಯಬೇಕಾಯಿತು. ಕಾರಣ ಬೆನ್ನುನೋವು. ಬಳಿಕ ಅವರು ಬ್ರಿಸ್ಬೇನ್‌ನ ಕ್ರೀಡಾ ಆಡಳಿತದಲ್ಲಿ ತೊಡಗಿಸಿಕೊಂಡಿದ್ದರು. 

ಮಿಲ್ಟನ್‌ನಲ್ಲಿ ನಡೆಯುತ್ತಿದ್ದ ಪ್ರಮುಖ ಟೆನಿಸ್‌ ಟೂರ್ನಿಗಳು, ಟೆನ್ನಿಸನ್‌ಗೆ ಸ್ಥಳಾಂತರವಾಗುವಂತೆ ಮಾಡುವಲ್ಲಿ ಅವರ ಪಾತ್ರವಿತ್ತು. ಸದ್ಯ ಬ್ರಿಸ್ಬೇನ್‌ ಅಂತರರಾಷ್ಟ್ರೀಯ ಟೂರ್ನಿ ಇಲ್ಲಿಯೇ ನಡೆಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು