ಪ್ಯಾರಿಸ್ (ಎಎಫ್ಪಿ): ಒಲಿಂಪಿಕ್ಸ್ನಲ್ಲಿ ಮೊದಲ ಸ್ವರ್ಣ ಗೆಲ್ಲುವ ಯತ್ನದಲ್ಲಿರುವ ನೊವಾಕ್ ಜೊಕೊವಿಚ್ ಶನಿವಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರನ್ನು 6–0, 6–1 ರಿಂದ ಸೋಲಿಸಿ ಶುಭಾರಂಭ ಮಾಡಿದರು. ಆ ಮೂಲಕ ಎರಡನೇ ಸುತ್ತಿನಲ್ಲಿ ರಫೆಲ್ ನಡಾಲ್ ಜೊತೆ ಸಂಭವನೀಯ ಹೋರಾಟಕ್ಕೆ ಸಜ್ಜಾದರು.

ಮಳೆಯಿಂದ ರೋಲಂಡ್ ಗ್ಯಾರೋಸ್ನಲ್ಲಿ ಕೆಲವು ಪಂದ್ಯಗಳು ಸಕಾಲಕ್ಕೆ ಆರಂಭವಾಗಲಿಲ್ಲ. ಆದರೆ ಫಿಲಿಪ್ ಶಾಟಿಯೆ ಕೋರ್ಟ್ನಲ್ಲಿ ಛಾವಣಿಯಡಿ ಆಡಿದ ಜೊಕೊವಿಚ್ ಕೇವಲ 54 ನಿಮಿಷಗಳಲ್ಲಿ ಪಂದ್ಯ ಗೆದ್ದರು.

ಕೆಲವು ಪಂದ್ಯಗಳು ಆರು ಗಂಟೆ ತಡವಾದವು. ಎರಡು ವಾರಗಳ ಹಿಂದೆ ವಿಂಬಲ್ಡನ್ ಫೈನಲ್ನಲ್ಲಿ ಜೊಕೊವಿಚ್ ಅವರನ್ನು ಸೋಲಿಸಿದ್ದ ಕಾರ್ಲೊಸ್ ಅಲ್ಕಾರೆಜ್ ಅವರು ಲೆಬನಾನ್ನ ಹದಿ ಹಬೀಬ್ ಅವರನ್ನು ಸುಲಭವಾಗಿ ಸೋಲಿಸಿದರು.

ಮಹಿಳೆಯರ ವಿಭಾಗದಲ್ಲಿ ಅಗ್ರ ಕ್ರಮಾಂಕದ ಇಗಾ ಶ್ವಾಂಟೆಕ್, ಐರಿನಾ ಕ್ಯಾಮಿಲಿಯಾ–ಬೇಗು ಅವರನ್ನು ಸುಲಭವಾಗಿ ಸೋಲಿಸಿದರು.

ತೊಡೆಯ ನೋವಿನಿಂದ ಬಳಲುತ್ತಿರುವ ನಡಾಲ್, ಭಾನುವಾರ ಮೊದಲ ಸುತ್ತಿನ ಪಂದ್ಯದಲ್ಲಿ ಮಾರ್ಟನ್ ಫುಸ್ಕೊವಿಕ್ಸ್ ಅವರನ್ನು ಎದುರಿಸಲಿದ್ದು, ಗೆದ್ದಲ್ಲಿ ಜೊಕೊವಿಚ್ ಅವರ ಮುಂದಿನ ಎದುರಾಳಿ ಆಗಲಿದ್ದಾರೆ.

‘ರೋಲಂಡ್ ಗ್ಯಾರೋಸ್ನಲ್ಲಿ ನಡಾಲ್ ದಾಖಲೆಗಳೇ ಎಲ್ಲವನ್ನೂ ಹೇಳುತ್ತವೆ’ ಎಂದು ಜೊಕೊವಿಚ್ ಅವರು ಸಂಭವನೀಯ ಎದುರಾಳಿಯ ಬಗ್ಗೆ ಮೆಚ್ಚುಗೆಯ ಮಾತು ಆಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.