ಭಾನುವಾರ, ಡಿಸೆಂಬರ್ 15, 2019
21 °C

ಸಿಡ್ನಿ ಇಂಟರ್‌ನ್ಯಾಷನಲ್‌ನಲ್ಲಿ ಹಲೆಪ್‌ ಕಣಕ್ಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Deccan Herald

ಸಿಡ್ನಿ: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ ಹಲೆಪ್‌, ಅಮೆರಿಕ ಓಪನ್‌ ಚಾಂ‍ಪಿಯನ್‌ ನವೊಮಿ ಒಸಾಕ ಮತ್ತು ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಏಂಜಲಿಕ್‌ ಕೆರ್ಬರ್‌ ಅವರು ಮುಂದಿನ ವರ್ಷ ನಡೆಯುವ ಸಿಡ್ನಿ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಜನವರಿ 6ರಿಂದ 12ರವರೆಗೆ ನಡೆಯುವ ಈ ಟೂರ್ನಿ ಆಸ್ಟ್ರೇಲಿಯಾ ಓಪನ್‌ಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ವೇದಿಕೆಯಾಗಿದೆ.

ರುಮೇನಿಯಾದ ಸಿಮೊನಾ ಮತ್ತು ಜಪಾನ್‌ನ ನವೊಮಿ ಅವರು ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ಕನಸಿನಲ್ಲಿದ್ದಾರೆ.

ಸ್ಲೋವಾನ್‌ ಸ್ಟೀಫನ್ಸ್‌, ಪೆಟ್ರಾ ಕ್ವಿಟೋವಾ, ಕ್ಯಾರೋಲಿನಾ ಪ್ಲಿಸ್ಕೋವಾ, ಕಿಕಿ ಬರ್ಟೆನ್ಸ್‌ ಮತ್ತು ಡೇರಿಯಾ ಕಸತ್ಕಿನಾ ಅವರೂ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಸ್ಥಾನ ಹೊಂದಿರುವ ಕ್ಯಾರೋಲಿನ್‌ ವೋಜ್ನಿಯಾಕಿ ಮತ್ತು ಎಲಿನಾ ಸ್ವಿಟೋಲಿನಾ ಅವರು ಟೂರ್ನಿಗೆ ಅಲಭ್ಯರಾಗಿದ್ದಾರೆ.

‍ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕೈಲ್‌ ಎಡ್ಮಂಡ್‌ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಇವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿದ್ದಾರೆ. ಗಿಲ್ಲೆಸ್‌ ಸಿಮೊನ್‌, ಅಲೆಕ್ಸ್‌ ಡಿ ಮಿನೌರ್‌, ಲುಕಾಸ್‌ ಪೌವಿಲ್‌ ಮತ್ತು ಜೋ ವಿಲ್ಫ್ರೆಡ್‌ ಸೊಂಗಾ ಅವರೂ ಟೂರ್ನಿಯಲ್ಲಿ ಆಡಲಿದ್ದಾರೆ.

‘ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಹೊಂದಿರುವ ಆಟಗಾರರು ಮತ್ತು ಆಟಗಾರ್ತಿಯರು ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವ ನಿರೀಕ್ಷೆ ಇದೆ’ ಎಂದು ಟೂರ್ನಿಯ ನಿರ್ದೇಶಕ ಲಾರೆನ್ಸ್‌ ರಾಬರ್ಟ್‌ಸನ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)