ಚಾಂಗ್ಶಾ (ಚೀನಾ): ಭಾರತ ತಂಡ, ಬಿಲ್ಲೀ ಜೀನ್ ಕಿಂಗ್ ಕಪ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ನ್ಯೂಜಿಲೆಂಡ್ ಎದುರು 1–2 ಅಂತರದ ಸೋಲನುಭವಿಸಿತು. ಅಂಕಿತಾ ರೈನಾ ನಿರ್ಣಾಯಕ ಎರಡನೇ ಸಿಂಗಲ್ಸ್ ಗೆಲ್ಲಲು ವಿಫಲವಾಗಿದ್ದು, ಪ್ರಾರ್ಥನಾ ತೊಂಬರೆ ಜೊತೆ ಡಬಲ್ಸ್‌ನಲ್ಲಿ ಸೋತಿದ್ದು ಹಿನ್ನಡೆಗೆ ಕಾರಣವಾಯಿತು.

ಮೂರನೇ ಸ್ಥಾನದಲ್ಲಿ ಮುಗಿಸಿದ ಕಾರಣ ಭಾರತ, ಏಷ್ಯಾ–ಒಷಾನಿಯಾ ಒಂದನೇ ಗುಂಪಿನಲ್ಲೇ ಉಳಿಯಲಿದೆ.

ಋತುಜಾ ಭೊಸಲೆ ಮೊದಲ ಸಿಂಗಲ್ಸ್‌ನಲ್ಲಿ 6–2, 7–5 ರಿಂದ ಮೋನಿಖ್ ಬಾರಿ ಅವರನ್ನು ಸೋಲಿ ಸಿದರು. ಆದರೆ ಅಂಕಿತಾ ಮುಂದಿನ ಪಂದ್ಯದಲ್ಲಿ ವಿಶ್ವದ 169ನೇ ಕ್ರಮಾಂಖದ ಆಟಗಾರ್ತಿ ಲುಲು ಸುನ್ ಅವರಿಗೆ 2–6, 0–6 ರಲ್ಲಿ ಸುಲಭವಾಗಿ ಶರಣಾದ ಕಾರಣ ಡಬಲ್ಸ್ ಪಂದ್ಯ ನಿರ್ಣಾಯಕವಾಯಿತು.

ಡಬಲ್ಸ್‌ನಲ್ಲಿ ಪ್ರಾರ್ಥನಾ ಜೊತೆ ಆಡಿದ ಅಂಕಿತಾ ಅಲ್ಲೂ 1–6, 5–7 ರಲ್ಲಿ ಪೈಗೆ ಹೂರಿಗನ್–ಎರಿನ್ ರೂಟ್ಲಿಫ್ ಜೋಡಿಗೆ ಮಣಿದಿರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.