ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಬಾರ್ಟಿಗೆ ಕಠಿಣ ಸವಾಲು

Last Updated 4 ಜನವರಿ 2020, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಷ್ಲೆ ಬಾರ್ಟಿಗೆ ಸೋಮವಾರದಿಂದ ಆರಂಭವಾಗುವ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.

ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ಆಸ್ಟ್ರೇಲಿಯಾದ ಬಾರ್ಟಿಗೆ ಎರಡನೇ ಸುತ್ತಿನಲ್ಲಿ ರಷ್ಯಾದ ಮರಿಯಾ ಶರಪೋವಾ ಸವಾಲು ಎದುರಾಗುವ ಸಾಧ್ಯತೆ ಇದೆ.

2017ರ ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಸ್ಲೋನ್‌ ಸ್ಟೀಫನ್ಸ್‌, ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಪೆಟ್ರಾ ಕ್ವಿಟೋವಾ, ಗ್ರ್ಯಾನ್‌ಸ್ಲಾಮ್‌ನಲ್ಲಿ ಮೂರು ಕಿರೀಟ ಮುಡಿಗೇರಿಸಿಕೊಂಡಿರುವ ಏಂಜಲಿಕ್‌ ಕೆರ್ಬರ್‌ ಮತ್ತು 2011ರ ಅಮೆರಿಕ ಓಪನ್‌ ಚಾಂಪಿಯನ್‌ ಸಮಂತಾ ಸೊಸುರ್‌ ಅವರೂ ಬಾರ್ಟಿ ಅವರ ಗುಂಪಿನಲ್ಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಆಟಗಾರ್ತಿಯ ಫೈನಲ್‌ ಹಾದಿ ಕಠಿಣ ಎನಿಸಿದೆ.

ಜಪಾನ್‌ನ ಆಟಗಾರ್ತಿ, ಹಾಲಿ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ನವೊಮಿ ಒಸಾಕ ಅವರು ಮೊದಲ ಸುತ್ತಿನಲ್ಲಿ ಮರಿಯಾ ಸಕ್ಕಾರಿ ವಿರುದ್ಧ ಸೆಣಸಲಿದ್ದಾರೆ.

ಪೆಟ್ರಾ ಕ್ವಿಟೋವಾ, ರಷ್ಯಾದ ಅನಸ್ತೇಸಿಯಾ ಪವಲ್ಯೂಚೆಂಕೊವಾ ಎದುರೂ; ಎಲಿನಾ ಸ್ವಿಟೋಲಿನಾ, ಅಮೆರಿಕದ ಡೇನಿಯೆಲೆ ಕಾಲಿನ್ಸ್‌ ಮೇಲೂ; ಏಂಜಲಿಕ್‌ ಕೆರ್ಬರ್‌, ಸಮಂತಾ ಸೊಸುರ್‌ ವಿರುದ್ಧವೂ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT