ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023| ಟೀಮ್ ಇಂಡಿಯಾ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ: ರವಿಶಾಸ್ತ್ರಿ ವಿಶ್ವಾಸ

Published 17 ನವೆಂಬರ್ 2023, 10:13 IST
Last Updated 17 ನವೆಂಬರ್ 2023, 10:13 IST
ಅಕ್ಷರ ಗಾತ್ರ

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವಕಪ್‌ ಫೈನಲ್‌ನಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ತಂಡ ಇದುವರೆಗಿನ ಕಾರ್ಯತಂತ್ರಗಳಿಗೇ ಅಂಟಿಕೊಳ್ಳಬೇಕು ಎಂದು ತಂಡದ ಮಾಜಿ ತರಬೇತುದಾರ ರವಿ ಶಾಸ್ತ್ರಿ ಸಲಹೆ ನೀಡಿದರು.

ಇಲ್ಲಿ ಸಮಾರಂಭವೊಂದಕ್ಕೆ ಬಂದಿದ್ದ ಸಂದರ್ಭದಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಫೈನಲ್‌ಗೆ ಭಾರತ ತಂಡದ ರಣತಂತ್ರ ಹೇಗಿರಬೇಕೆಂಬ ಪ್ರಶ್ನೆಗೆ ‘ಅವರು ವಿಶೇಷವಾದುದೇನನ್ನೂ ಮಾಡುವ ಅಗತ್ಯವಿಲ್ಲ. ಆಟಗಾರರು ಈಗ ವಿಶ್ರಾಂತಿಯ ಮೂಡ್‌ನಲ್ಲಿರಬಹುದು. ಅವರು ತವರಿನಲ್ಲಿ ಆಡುತ್ತಿದ್ದಾರೆ. ಇದು ಅನುಭವಿ ತಂಡ ಕೂಡ. ಈ ಹಂತದಲ್ಲಿ ಭಿನ್ನವಾದುದೇನನ್ನೂ ಮಾಡುವ ಅವಶ್ಯಕತೆಯಿಲ್ಲ’ ಎಂದು ಶಾಸ್ತ್ರಿ ಉತ್ತರಿಸಿದರು.

‘ಇದುವರೆಗಿನ ಆಟ ನೋಡಿದರೆ ಭಾರತವೇ ವಿಶ್ವಕಪ್ ಗೆಲ್ಲಲಿದೆ. ಫೈನಲ್‌ನಲ್ಲಿ ಅವರೇ ಫೆವರೀಟ್‌ಗಳು. ಅವರು ಅಮೋಘವಾಗಿ ಆಡಿದ್ದಾರೆ’ ಎಂದು ಗುಣಗಾನ ಮಾಡಿದರು.

ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದರೂ, ಅಂತಿಮ ಪಂದ್ಯದಲ್ಲಿ ಭಾರತಕ್ಕೂ ಒತ್ತಡವಿರಲಿದೆ. ಏಕೆಂದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಸಾಧನೆ ಉತ್ತಮವಾಗಿದೆ.

ಆದರೆ, ‘ಭಾರತ ತಂಡದವರು ಸಂಯಮ ವಹಿಸಿ, ಒತ್ತಡ ನಿಭಾಯಿಸಿಕೊಂಡಲ್ಲಿ ವಿಜೇತರಾಗಲಿದ್ದಾರೆ’ ಎಂಬುದು ಶಾಸ್ತ್ರಿ ಅನಿಸಿದೆ. ಇದು ಫೈನಲ್ ಪಂದ್ಯ ಎಂಬ ಮಾತ್ರಕ್ಕೇ ಉದ್ವೇಗಗೊಳ್ಳುವ ಅಗತ್ಯವಿಲ್ಲ ಎಂಬುದು ಅವರ ಕಿವಿಮಾತು.

‘ನಿಮಗೆ (ಭಾರತದ ಆಟಗಾರರಿಗೆ) ನಿಮ್ಮ ಪಾತ್ರವೇನು ಎಂಬುದು ಗೊತ್ತಿದೆ. ಸಕಾರಾತ್ಮಕ ವಿಷಯವೆಂದರೆ ತಂಡ ಒಬ್ಬಿಬ್ಬರ ಮೇಲೆ ಅವಲಂಬಿತವಾಗಿಲ್ಲ. ಎಂಟರಿಂದ ಒಂಬತ್ತು ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದು ಶುಭಸಂಕೇತ’ ಎಂದರು.

ಮೊಹಮ್ಮದ್ ಶಮಿ ಅವರ ಅಮೋಘ ಬೌಲಿಂಗ್ ಪ್ರದರ್ಶನವನ್ನು ಶ್ಲಾಘಿಸಿದ ಮಾಜಿ ಆಲ್‌ರೌಂಡರ್‌, ‘ಭಾನುವಾರರ ನಡೆಯುವ ಫೈನಲ್‌ನಲ್ಲೂ ಅವರಿಗೆ ಮಹತ್ವದ ಪಾತ್ರವಿರಲಿದೆ’ ಎಂದರು.

‘ಸೀಮ್ ಪ್ರಸ್ತುತಿ, ಚೆಂಡು ಲ್ಯಾಂಡ್‌ ಆಗುವ ರೀತಿ ... ಅವರು ಈ ವಿಶ್ವಕಪ್‌ನಲ್ಲಿ ಸತತವಾಗಿ ಸೂಕ್ತ ಲೆಂಗ್ತ್‌ಗಳಲ್ಲೇ ಬೌಲಿಂಗ್‌ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಸೆಮಿಫೈನಲ್‌ನಲ್ಲೂ ಅವರು  ಬೌಲಿಂಗ್ ಕೌಶಲ ಮೆರೆದ ರೀತಿ ಅನನ್ಯ’ ಎಂದರು. ತಂಡದ ಬೌಲಿಂಗ್ ಶ್ರೇಷ್ಠವಾಗಿದೆ. ವೈವಿಧ್ಯದಿಂದ ಕೂಡಿದೆ ಎಂದೂ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT