ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಸಾಧನೆಯ ಮಾತನಾಡಬೇಕು: ಶಾಸಕ ಬಿ.ಶಿವಣ್ಣ

ಬಯೋಕಾನ್ ಸಂಸ್ಥೆಯಿಂದ ಹೆಬ್ಬಗೋಡಿನಲ್ಲಿ ಕೆರೆ ಉದ್ಘಾಟನೆ
Last Updated 3 ಡಿಸೆಂಬರ್ 2018, 19:43 IST
ಅಕ್ಷರ ಗಾತ್ರ

ಆನೇಕಲ್: ಕೆಲಸಗಳೇ ಸಾಧನೆಗಳ ಕುರಿತು ಮಾತನಾಡಬೇಕು. ಈ ನಿಟ್ಟಿನಲ್ಲಿ ಬಯೋಕಾನ್ ಸಂಸ್ಥೆಯು ಹೆಬ್ಬಗೋಡಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಕಾಳಜಿಯ ಕೆರೆಗಳ ಅಭಿವೃದ್ಧಿಯಲ್ಲಿ ಕೈಗೊಂಡಿರುವ ಕೆಲಸಗಳು ಮಾದರಿಯಾಗಿವೆ ಎಂದು ಶಾಸಕ ಬಿ. ಶಿವಣ್ಣ ತಿಳಿಸಿದರು.

ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಪ್ರತಿಷ್ಠಾನದ ವತಿಯಿಂದ ಪುನರುಜ್ಜೀವನಗೊಂಡ ಕೆರೆ ಉದ್ಘಾಟನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

‘ಕಿರಣ್ ಮಜುಂದಾರ್ ಷಾ ಅವರ ಕಾಳಜಿ ಯಿಂದಾಗಿ ಕೈಗೊಂಡಿರುವ ಕೆರೆ ಅಭಿವೃದ್ಧಿಯಿಂದಾಗಿ ಹಾಳಾಗಿದ್ದ ಕೆರೆ ಜೀವಂತವಾಗಿದೆ. ಕಲುಷಿತಗೊಂಡಿದ್ದ ಕೆರೆಯ ನೀರನ್ನು ಸ್ವಚ್ಛಗೊಳಿಸಲು ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ’ ಎಂದರು.

ಹೆಬ್ಬಗೋಡಿಗೆ ಕಾವೇರಿ ಕುಡಿಯುವ ನೀರಿನ ಪೂರೈಕೆಯ ಸಂಪೂರ್ಣ ವೆಚ್ಚವನ್ನು ಬಯೋಕಾನ್ ಕಾರ್ಖಾನೆ ಭರಿಸುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡಿದೆ ಎಂದರು.

ಸ್ಥಳೀಯರಿಗೆ ಉದ್ಯೋಗ: ಸಂಸ್ಥೆ ಉದ್ಯೋಗ ನೀಡುವಾಗ ಅರ್ಹ ಸ್ಥಳೀಯರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಎಲ್ಲ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ನೀಡುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಷಾ ಮಾತನಾಡಿ, ಬಯೋಕಾನ್ ಮತ್ತು ಸಿಂಜಿನ್ ಸಂಸ್ಥೆಯ ಸಿಎಸ್ಆರ್ ನಿಧಿಯ ಮೂಲಕ ಹೆಬ್ಬಗೋಡಿ ಕೆರೆ ಪುನರುಜ್ಜೀವನಗೊಂಡಿದ್ದು ಮಹತ್ವಾಕಾಂಕ್ಷೆಯ ಕೆಲಸವೊಂದು ಪೂರ್ಣಗೊಂಡ ತೃಪ್ತಿಯಿದೆ. ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಮುಂಬರುವ ದಿನಗಳಲ್ಲಿ ಕಮ್ಮಸಂದ್ರ, ಬೊಮ್ಮಸಂದ್ರ ಕೆರೆಗಳ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲಾಗಿದೆ ಎಂದರು.

ಚಿತ್ರಗಳಲ್ಲಿ ಮಾತ್ರ: ಹೆಬ್ಬಗೋಡಿ ಕೆರೆಯಲ್ಲಿ ಕೃತಕ ತೇಲುವ ದೀಪಗಳನ್ನು ಅಳವಡಿಸಲಾಗಿದೆ. ಇದು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ ಪ್ರಕಾರ ಭಾರತದ ಕೆರೆಯೊಂದರಲ್ಲಿ ನಿರ್ಮಿಸಿರುವ ಅತಿ ದೊಡ್ಡ ತೇಲುವ ದೀಪಗಳಾಗಿವೆ. ಬೆಂಗಳೂರು ಸುತ್ತಮುತ್ತ 1960ರಲ್ಲಿ 250ಕ್ಕೂ ಹೆಚ್ಚು ಕೆರೆಗಳಿದ್ದವು ಈಗ ಕೆರೆಗಳು ಅಸ್ತಿತ್ವ ಕಳೆದುಕೊಂಡು ಕೇವಲ 30–40 ಕೆರೆಗಳು ಉಳಿದಿವೆ. ಕೆರೆ ಒತ್ತುವರಿ ಹೀಗೆ ಮುಂದುವರೆದರೆ ಮುಂದೊಂದು ದಿನ ಇವುಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಬಯೋಕಾನ್‌ನಿಂದ ಕೆರೆ ಅಭಿವೃದ್ಧಿ: ಹೆಬ್ಬಗೋಡಿ ಕೆರೆಯು 35 ಎಕರೆ ವಿಸ್ತಿರ್ಣವಿದ್ದು ಎರಡು ಕಿ.ಮೀ. ಸುತ್ತಳತೆಯಿದೆ. ಎರಡು ರಾಜ ಕಾಲುವೆಗಳಿದ್ದು ವಾಣಿಜ್ಯ ಮಳಿಗೆಗಳು ಹಾಗೂ ವಸತಿ ಸಂಕೀರ್ಣಗಳಿಂದ ಕೆರೆಗೆ ಕಲುಷಿತ ನೀರು ಸೇರಿ ಮಾಲಿನ್ಯಗೊಳ್ಳುತ್ತಿತ್ತು.

ತಿರುಪಾಳ್ಯ, ವೀರಸಂದ್ರ, ಕೆರೆಗಳಿಂದ ಕೆರೆಗೆ ನೀರು ಬರುತ್ತಿತ್ತು ಹೆಬ್ಬಗೋಡಿ ಕೆರೆ ತುಂಬಿದ ನಂತರ ಕಮ್ಮಸಂದ್ರ ಕೆರೆಗೆ ಹೋಗುತ್ತದೆ. ಚರಂಡಿ ತ್ಯಾಜ್ಯ ಹಾಗೂ ಡೆಬ್ರಿ, ಘನತ್ಯಾಜ್ಯಗಳಿಂದ ಮಾಲಿನ್ಯಗೊಂಡಿದ್ದ ಹೆಬ್ಬಗೋಡಿ ಕೆರೆಗೆ 2016ರಲ್ಲಿ ಬಯೋಕಾನ್ ಪ್ರತಿಷ್ಠಾನ ಅಭಿವೃದ್ಧಿ ಮುಂದಾಯಿತು.

**

75 ಕೆರೆಗಳಲ್ಲಿ 50 ಕಲುಷಿತ

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಬೆಂಗಳೂರಿನ 75 ಕೆರೆಗಳನ್ನು ವೀಕ್ಷಿಸಲಾಗಿದೆ. ಈ ಪೈಕಿ 50 ಕೆರೆಗಳು ಇ ಕ್ಯಾಟಗರಿಯಲ್ಲಿದ್ದು ಮೀನುಗಾರಿಕೆಗೆ ಕಲುಷಿತವಾಗಿದ್ದು ಅರ್ಹವಾಗಿಲ್ಲ. ಕೊಳಚೆ ನೀರಿನಿಂದಾಗಿ ಕೆರೆಗಳು ಹಾಳಾಗಿವೆ. ಚರಂಡಿ ಹಾಗೂ ಕೊಳಚೆ ನೀರು ಕೆರೆಗಳಿಗೆ ಬಿಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಎಸ್‌ಟಿಪಿ ಪ್ಲ್ಯಾಂಟ್ ನಿರ್ಮಾಣ ಮಾಡಿ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಬಿಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT