ಮಂಗಳವಾರ, ಮೇ 17, 2022
27 °C

ಪ್ರತಿ 50 ಕಿ.ಮೀ. ರಸ್ತೆ ನಿರ್ವಹಣೆಗೆ ಒಂದು ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆ–ಗಾಳಿಯಿಂದ ಬೀಳುವ ಮರಗಳನ್ನು ತಕ್ಷಣ ತೆರವು ಮಾಡಲು, ಕಸದಿಂದ ಬಂದ್ ಆಗುವ ಚರಂಡಿಗಳನ್ನು ಶುಚಿಗೊಳಿಸಿ ಮಳೆನೀರಿಗೆ ದಾರಿ ಮಾಡಲು ಬಿಬಿಎಂಪಿಯು ಎಂಜಿನಿಯರ್‌ಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿದೆ.

ಮಳೆಯಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆಯು ಸದ್ಯ ಮಾಡಿಕೊಂಡಿರುವ ತಯಾರಿ ಕುರಿತು ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ಪಾಲಿಕೆಯ ಮುಖ್ಯ ರಸ್ತೆಗಳ ನಿರ್ವಹಣಾ ವಿಭಾಗದ ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್‌ಗಳ(ಎಇಇ) ನೇತೃತ್ವದಲ್ಲಿ 24 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೂ ಮುಖ್ಯರಸ್ತೆಗಳ 50 ಕಿ.ಮೀ. ಉದ್ದದ ಪ್ರದೇಶ ಹಂಚಿಕೆ ಮಾಡಲಾಗಿದೆ. ಬಿದ್ದ ಮರಗಳನ್ನು ತೆರವು ಮಾಡುವ, ಚರಂಡಿಗಳಲ್ಲಿ ತುಂಬಿಕೊಂಡ ಕಸ ತೆಗೆಯುವ 10ರಿಂದ 15 ಸಿಬ್ಬಂದಿ ಪ್ರತಿ ತಂಡದಲ್ಲೂ ಇರುತ್ತಾರೆ’ ಎಂದು ಅವರು ಹೇಳಿದರು.

‘ಮಳೆಯಿಂದ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚು ಮರಗಳು ಬಿದ್ದರೆ ಅಥವಾ ಅವಘಡ ಸಂಭವಿಸಿದರೆ, ಹೆಚ್ಚು ಹಾನಿ ಸಂಭವಿಸದ ಪ್ರದೇಶದ ತಂಡ ಅಲ್ಲಿಗೆ ಬಂದು ನೆರವಾಗಲಿದೆ’ ಎಂದು ಹೇಳಿದರು.

‘ರಸ್ತೆಗಳಲ್ಲಿ ಬಿದ್ದ ಕಸ ಗುಡಿಯಲು ಸದ್ಯ ಕಸ ಗುಡಿಸುವ 9 ಯಂತ್ರಗಳಿವೆ. ಈಗಾಗಲೇ ಮಾಡಿಕೊಂಡಿರುವ ಒಪ್ಪಂದದಂತೆ 15 ದಿನಗಳೊಳಗೆ ಇನ್ನೂ 17 ಯಂತ್ರಗಳು ಕಾರ್ಯಾಚರಣೆಗೆ ಇಳಿಯಲಿವೆ’ ಎಂದು ಅವರು ತಿಳಿಸಿದರು.

*

ಮಂಗಳವಾರ ಇದ್ದಕ್ಕಿದ್ದಂತೆ ಹಲವೆಡೆ 15 ಸೆಂ.ಮೀ.ವರೆಗೂ ಸುರಿಯಿತು. ಹಾಗಾಗಿ ಮರಗಳು ಬಿದ್ದು, ಜನರು ತೊಂದರೆ ಅನುಭವಿಸಿದರು.

ಎನ್‌.ಮಂಜುನಾಥ ಪ್ರಸಾದ್, ಆಯುಕ್ತ, ಬಿಬಿಎಂಪಿ
*

ಅಂಕಿ–ಅಂಶ

70

ಮಂಗಳವಾರದ ಮಳೆಗೆ ಬಿದ್ದ ಮರಗಳು

160

ಬಿದ್ದ ದೊಡ್ಡ ಕೊಂಬೆಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು