ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | 771 ಮಂದಿ ಸಾವು, 40574 ಮಂದಿ ಚೇತರಿಕೆ

Last Updated 3 ಆಗಸ್ಟ್ 2020, 17:14 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 40574 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 11,86,203 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 579357 ಆಗಿದೆ. ಇಲ್ಲಿಯವರೆಗೆ 38135 ಮಂದಿ ಸಾವಿಗೀಡಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ 771 ಮಂದಿ ಮೃತಪಟ್ಟಿದ್ದಾರೆ.

52972 ಹೊಸ ಪ್ರಕರಣಗಳು ವರದಿಯಾಗಿತ್ತು ಸೋಂಕು ಪ್ರಕರಣಗಳ ಸಂಖ್ಯೆ 18 ಲಕ್ಷ ದಾಟಿದೆ.

ಸಿಕ್ಕಿಂನಲ್ಲಿ 30 ಹೊಸ ಪ್ರಕರಣಗಳು ವರದಿ ಆಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 688 ಆಗಿದೆ. ಗುಜರಾತಿನಲ್ಲಿ ಇಂದು 1,009 ಮಂದಿಗೆ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 64,684ಕ್ಕೇರಿದೆ, 22 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 2, 509ಕ್ಕೇರಿದೆ,

ರಾಜಸ್ಥಾನದಲ್ಲಿ ಸೋಮವಾರ 1,145 ಹೊಸ ಪ್ರಕರಣಗಳು ವರದಿ ಆಗಿದ್ದು 13 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 45,555 ಆಗಿದ್ದು ಈ ಪೈಕಿ 12,785 ಸಕ್ರಿಯ ಪ್ರಕರಣಗಳಿವೆ.ಇಲ್ಲಿಯವರೆಗೆ 32,051ಮಂದಿ ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಗೋವಾದಲ್ಲಿ ಇವತ್ತು 286 ಹೊಸ ಪ್ರಕರಣಗಳು ವರದಿಯಾಗಿವೆ, ಇಲ್ಲಿಯವರೆಗೆ 56 ಮಂದಿ ಮೃತಪಟ್ಟಿದ್ದಾರೆ.ಒಟ್ಟು ಸೋಂಕಿತರ ಸಂಖ್ಯೆ 6,816 ಆಗಿದ್ದು 4,876 ಮಂದಿ ಗುಣಮುಖರಾಗಿದ್ದಾರೆ.

ಹರ್ಯಾಣದಲ್ಲಿ ಕಳೆದ 24 ಗಂಟೆಗಳಲ್ಲಿ 654 ಪ್ರಕರಣಗಳು ವರದಿಯಾಗಿದ್ದು 7 ಮಂದಿಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 37,173 ಆಗಿದ್ದು ಈವರೆಗೆ 440 ಮಂದಿ ಸಾವಿಗೀಡಾಗಿದ್ದಾರೆ, 30,470 ಮಂದಿ ಗುಣಮುಖರಾಗಿದ್ದು, ರಾಜ್ಯದಲ್ಲಿ 6, 263 ಸಕ್ರಿಯ ಪ್ರಕರಣಗಳು ಇವೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಕೇರಳದಲ್ಲಿ 962 ಹೊಸ ಪ್ರಕರಣಗಳು ವರದಿಯಾಗಿದ್ದು ಕಳೆದ 24 ಗಂಟೆಗಳಲ್ಲಿ 815 ಮಂದಿ ಗುಣಮುಖರಾಗಿದ್ದಾರೆ, 11,484 ಸಕ್ರಿಯ ಪ್ರಕರಣಗಳಿವೆ.15, 282 ಮಂದಿ ಗುಣಮುಖರಾಗಿದ್ದು 19, 343 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ.

ಮಹಾರಾಷ್ಟ್ರದಲ್ಲಿ 8,968 ಹೊಸ ಪ್ರಕರಣಗಳು ವರದಿಯಾಗಿದ್ದು 266 ಮಂದಿ ಮೃತಪಟ್ಟಿದ್ದಾರೆ, 10,221 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 4,50,196ಕ್ಕೇರಿದ್ದು 2,87,030 ಮಂದಿ ಚೇತರಿಸಿಗೊಂಡಿದ್ದಾರೆ.ಈವರೆಗೆ 15,842 ಮಂದಿ ಮೃತಪಟ್ಟಿದ್ದಾರೆ.

ಪಂಜಾಬ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 677 ಸೋಂಕು ಪ್ರಕರಣಗಳು ವರದಿಯಾಗಿದ್ದು 19 ಮಂದಿ ಸಾವಿಗೀಡಾಗಿದ್ದಾರೆ, ಒಟ್ಟು ಪ್ರಕರಣಗಳ ಸಂಖ್ಯೆ 18,527 ಆಗಿದ್ದು 11,882 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 442 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT