ಗುರುವಾರ , ಆಗಸ್ಟ್ 5, 2021
23 °C

ರೌಡಿಶೀಟರ್ ದುಬೆಗೆ ರಕ್ಷಣೆ ; ಸಿಬಿಐ ತನಿಖೆಯಿಂದ ಸತ್ಯ ಬಹಿರಂಗ: ಪ್ರಿಯಾಂಕಾ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೌಡಿಶೀಟರ್‌ ವಿಕಾಸ್‌ ದುಬೆಗೆ ರಕ್ಷಣೆ ನೀಡಲಾಗಿತ್ತೇ ಎಂಬುದು ಗೊತ್ತಾಗಬೇಕಾದರೆ ಸಿಬಿಐ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಹೇಳಿದ್ದಾರೆ.

ವಿಕಾಸ್ ಹಾಗೂ ಆತನ ಸಹಚರರು ನಡೆಸಿದ ಅಡಗುದಾಳಿ ಪ್ರಕರಣವನ್ನು ನಿಭಾಯಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ವಿಫಲವಾಗಿದೆ. 8 ಜನ ಪೊಲೀಸರ ಹತ್ಯೆ ನಂತರದ ಘಟನಾವಳಿಗಳು ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಜಗಜ್ಜಾಹೀರು ಮಾಡಿವೆ ಎಂದು ಅವರು ಟೀಕಿಸಿದ್ದಾರೆ. 

ದುಬೆ ಹಾಗೂ ಆತನ ಸಹಚರರು ಇತ್ತೀಚೆಗೆ ನಡೆಸಿದ ದಾಳಿಯಲ್ಲಿ 8 ಜನ ಪೊಲೀಸರು ಹತರಾಗಿದ್ದರು. ಮುಖ್ಯ ಆರೋಪಿ ದುಬೆನನ್ನು ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು