ಬುಧವಾರ, ಫೆಬ್ರವರಿ 19, 2020
23 °C

ಕೊರೊನಾ ಭಯ: ಚೀನಾದಿಂದ ಜನರನ್ನು ಕರೆತರಲು ನಿರಾಕರಿಸಿದ ಬಾಂಗ್ಲಾ ವಿಮಾನದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ: ಚೀನಾದಲ್ಲಿ ನೆಲೆಸಿರುವ 171 ಬಾಂಗ್ಲಾದೇಶಿ ನಾಗರಿಕರನ್ನು ಕರೆತರುವ ಅಲ್ಲಿನ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಚೀನಾಗೆ ತೆರಳಲು ವಿಮಾನದ ಸಿಬ್ಬಂದಿ ನಿರಾಕರಿಸಿದ್ದರಿಂದ ರಕ್ಷಣಾ ಕಾರ್ಯಚರಣೆಯನ್ನು ಮೊಟಕುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.  

ಬಾಂಗ್ಲಾದೇಶಿ ಸರ್ಕಾರಿ ವಿಮಾನಯಾನ ಸಂಸ್ಥೆ ಬಿಮನ್ ಫೆಬ್ರವರಿ 1ರಂದು ಕೊರೊನಾ ಪೀಡಿತ ಚೀನಾರಿಂದ 312 ನಾಗರಿಕರನ್ನು ಕರೆತಂದಿತ್ತು. ಆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿಮಾನ ಸಿಬ್ಬಂದಿ ಕೊರೊನ ವೈರಸ್‌ನ ಭಯದಲ್ಲಿ ಇದ್ದಾರೆ. 

ಕಳೆದ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್‌ ಸೋಂಕಿಗೆ ಈ ವರೆಗೆ ಒಟ್ಟು 811 ಜನರು ಮೃತರಾಗಿದ್ದು, 37,200 ಜನರಿಗೆ ಸೋಂಕು ತಗಲಿರುವುದಾಗಿ ವರದಿಯಾಗಿದೆ. 

ನಮಗೆ ವಿಮಾನವನ್ನು ಕಳುಹಿಸಲು ಸಮಸ್ಯೆಯಾಗುತ್ತಿದೆ, ವಿಮಾನದ ಸಿಬ್ಬಂದಿ ಚೀನಾಗೆ ತೆರಳಲು ಒಪ್ಪುತ್ತಿಲ್ಲ ಎಂದು ಬಾಂಗ್ಲಾದೇಶದ ವಿದೇಶಾಂಗ ಮಂತ್ರಿ ಅಬ್ದುಲ್ ಮೂಮಿನ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು