ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬೋಲಾ ವೈರಸ್‌ ಆಮದು ಮಾಡಿಕೊಂಡ ಜಪಾನ್‌: ಏನಿದರ ಮರ್ಮ? 

Last Updated 23 ಅಕ್ಟೋಬರ್ 2019, 7:35 IST
ಅಕ್ಷರ ಗಾತ್ರ

ಟೋಕಿಯೊ(ಜಪಾನ್‌): ಒಲಿಂಪಿಕ್‌ ಕ್ರೀಡಾ ಕೂಟಕ್ಕೆ ದೊಡ್ಡ ಮಟ್ಟದ ಸಿದ್ಧತೆ ಮಾಡಿಕೊಳ್ಳುತ್ತಿರುವ ಜಪಾನ್‌ ಕಳೆದ ವಾರ ಎಬೋಲ ಸೇರಿದಂತೆ ಐದು ಅತ್ಯಂತ ಅಪಾಯಕಾರಿ ವೈರಸ್‌ಗಳನ್ನು ಆಮದು ಮಾಡಿಕೊಂಡಿದೆ.

2020ರಲ್ಲಿ ಟೊಕಿಯೊದಲ್ಲಿ ಒಲಿಂಪಿಕ್‌ ಕ್ರೀಡಾ ಕೂಟ ನಡೆಯಲಿದೆ. ಈ ಕೂಟಕ್ಕೆ ಜಾಗತ್ತಿನ ಸಾವಿರಾರು ಕ್ರೀಡಾಳುಗಳು, ಪ್ರವಾಸಿಗರು ಆಗಮಿಸುತ್ತಾರೆ. ಈ ವೇಳೆ ವೈರಸ್‌ಗಳಿಂದ ಎದುರಾಗಬಹುದಾದ ಯಾವುದೇ ದೊಡ್ಡ ಅಪಾಯಗಳನ್ನು ತಡೆಯಲು ನಿರ್ಧರಿಸಿರುವ ಜಪಾನ್‌ ಅಪಾಯಕಾರಿ ವೈರಸ್‌ಗಳ ಮೇಲೆ ಸಂಶೋಧನೆಗೆ ಮುಂದಾಗಿದೆ.

ಈ ಕುರಿತು ಮಾತನಾಡಿರುವ ಜಪಾನ್‌ ಆರೋಗ್ಯ ಇಲಾಖೆ ಸಚಿವರು, ‘ ಎಬೋಲಾ, ಮರ್ಬರ್ಗ್‌, ಲಸ್ಸಾ ವೈರಸ್‌ಗಳು, ದಕ್ಷಿಣ ಅಮೆರಿಕ ಮೂಲದ ರಸ್ತಸ್ರಾವ ಯುಕ್ತ ಜ್ವರ ತರುವ ಮತ್ತು ಕ್ರಿಮಿಯನ್-ಕಾಂಗೋ ರಕ್ತಸ್ರಾವ ಜ್ವರ ಉಂಟು ಮಾಡುವ ವೈರಸ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ವೈರಸ್‌ಗಳನ್ನು ತಜ್ಞರು ಅಧ್ಯಯನ ಮಾಡಲಿದ್ದಾರೆ,’ ಎಂದು ಅವರು ತಿಳಿಸಿದ್ದಾರೆ.

ಜೀವಸುರಕ್ಷಾ ಹಂತ –4 (ಬಿಎಸ್ಎಲ್‌–4) ಅಡಿಯಲ್ಲಿ ಬರುವ ಈ ಅಪಾಯಕಾರಿ ವೈರಸ್‌ಗಳನ್ನು ಜಪಾನ್‌ನ ರಾಷ್ಟ್ರೀಯ ಸೋಕು ಅಧ್ಯಯನ ಸಂಸ್ಥೆಯಲ್ಲಿ (ಎನ್‌ಐಐಡಿ) ಇರಿಸಲಾಗಿದೆ. ಬಿಎಸ್‌ಎಲ್‌–4 ವೈರಸ್‌ಗಳನ್ನು ಅಧ್ಯಯನ ಮಾಡುವ ಲ್ಯಾಬ್‌ಗಳನ್ನು ಜಪಾನ್‌ ಎನ್‌ಐಐಡಿ 1980ರರಲ್ಲೇ ನಿರ್ಮಿಸಿದೆಯಾದರೂ, ಆ ವೈರಸ್‌ಗಳನ್ನು ಅಲ್ಲಿಗೆ ತರುತ್ತಿರುವುದೇ ಇದೇ ಮೊದಲು ಎಂದೂ ಜಪಾನ್‌ ಹೇಳಿಕೊಂಡಿದೆ.

ಸದ್ಯ ಈ ವೈರಸ್‌ಗಳ ಮೇಲಿನ ಅಧ್ಯಯನ ನಡೆಸುವ ಜಪಾನ್‌ ಸರ್ಕಾರದ ನಿರ್ಧಾರವನ್ನು ಅಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಸ್ವಾಗತಿಸಿದೆ. ಬಿಎಸ್‌ಎಲ್‌–4 ಹಂತದ ಜೀವಂತ ವೈರಸ್‌ಗಳ ಮೇಲಿನ ಅಧ್ಯಯನದಿಂದಾಗಿ ಮುಂದೆಎದುರಾಗಬಹುದಾದ ದಿಢೀರ್‌ ಆಪತ್ತಿನಿಂದ ಪಾರಾಗಲು ದೇಶಕ್ಕೆ ಸಾಧ್ಯವಿದೆ ಎಂದು ಅದು ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT