ಶನಿವಾರ, ಜನವರಿ 18, 2020
19 °C
ಮುಖಾಮುಖಿ ಮಾತುಗತೆಗೆ ಆಹ್ವಾನಿಸಿದ ರಾಣಿ ಎಲಿಜಬೆತ್‌

ಹ್ಯಾರಿ ದಂಪತಿ ಭವಿಷ್ಯ ನಿರ್ಧರಿಸಲು ಇಂದು ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ : ರಾಜಮನೆತನದ ಹೊಣೆಗಾರಿಕೆ ಮತ್ತು ಕರ್ತವ್ಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿರುವ ರಾಜಕುಮಾರ ಹ್ಯಾರಿ ಹಾಗೂ ಮೇಘನ್‌ ಮಾರ್ಕೆಲ್‌ ದಂಪತಿಯನ್ನು ಮುಖಾಮುಖಿ ಮಾತುಕತೆ ನಡೆಸಲು ರಾಣಿ ಎಲಿಜಬೆತ್‌–2 ಸೋಮವಾರ ಕರೆದಿದ್ದಾರೆ.

ನಾರ್‌ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್‌ ಎಸ್ಟೇಟ್‌ನಲ್ಲಿ ಎಲಿಜಬೆತ್‌ ಅವರು ಸಭೆ ಕರೆದಿದ್ದು, ಹ್ಯಾರಿ, ಅವರ ಸಹೋದರ ವಿಲಿಯಂ ಹಾಗೂ ಅವರ ತಂದೆ ರಾಜಕುಮಾರ ಚಾರ್ಲ್ಸ್‌ ಅವರನ್ನು ಆಹ್ವಾನಿಸಿದ್ದಾರೆ. ಮೇಘನ್‌ ಅವರು ಕೆನಡಾದಲ್ಲಿರುವುದರಿಂದ ದೂರವಾಣಿ ಮೂಲಕ ಸಭೆಯ ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. 

ಹ್ಯಾರಿ ದಂಪತಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ ನಂತರ ಮೊದಲ ಬಾರಿಗೆ 93 ವರ್ಷ ವಯಸ್ಸಿನ ಎಲಿಜಬೆತ್‌ ಅವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ. ಸೋಮವಾರದ ಸಭೆಯು ಹ್ಯಾರಿ ದಂಪತಿಯ ಭವಿಷ್ಯದ ಯೋಜನೆಗಳು ಹಾಗೂ ರಾಜಮನೆತನದ ಕರ್ತವವನ್ನು ಮುಂದುವರಿಸಲಿದ್ದಾರೆಯೇ ಎಂಬುದನ್ನು ನಿರ್ಧರಿಸಲಿದೆ.

ಈ ಸಭೆಯನ್ನು ಸ್ಯಾಂಡ್ರಿಂಗ್‌ಹ್ಯಾಮ್‌ ಶೃಂಗಸಭೆ ಎಂದು ಕರೆಯಲಾಗಿದೆ. ಸಭೆಯಲ್ಲಿ ರಾಜಮನೆತನದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ನಿವಾರಿಸುವ ಪ್ರಯತ್ನ ನಡೆಯಲಿದೆ. ಆರ್ಥಿಕವಾಗಿ ಸ್ವತಂತ್ರರಾಗಬೇಕು ಎಂಬ ಹ್ಯಾರಿ ದಂಪತಿಯ ಉದ್ದೇಶದ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಎಂದು ಅರಮನೆಯ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)