ಗುರುವಾರ , ಜುಲೈ 29, 2021
25 °C

ಅಮೆರಿಕದಲ್ಲಿ ಒಂದು ಕೆಲಸದ ಅವಕಾಶಕ್ಕೆ 4.6 ನಿರುದ್ಯೋಗಿಗಳು: ಕೋವಿಡ್–19 ಪರಿಣಾಮ

ಎಪಿ Updated:

ಅಕ್ಷರ ಗಾತ್ರ : | |

ಉದ್ಯೋಗ ಹುಡುಕಾಟ–ಸಾಂದರ್ಭಿಕ ಚಿತ್ರ

ಬಾಲ್ಟಿಮೋರ್‌: ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿದ್ದಂತೆ ಅಮೆರಿಕದಲ್ಲಿ ಕಚೇರಿಗಳು, ರೆಸ್ಟೊರೆಂಟ್‌ಗಳು, ಮಳಿಗೆಗಳು ಹಾಗೂ ಶಾಲೆಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದವು. ಇದರ ಪರಿಣಾಮ ಉದ್ಯೋಗದಾತರು ಏಪ್ರಿಲ್‌ನಲ್ಲಿ 77 ಲಕ್ಷ ನೌಕರರನ್ನು ಕೆಲಸದಿಂದ ತೆಗೆದು ಹಾಕಿದರು.

ಏಪ್ರಿಲ್‌ನಲ್ಲಿ ಕೆಲಸದ ಅವಕಾಶ ತೀವ್ರ ಇಳಿಕೆಯಾಯಿತು ಹಾಗೂ ಉದ್ಯೋಗ ನೀಡುವ ಪ್ರಕ್ರಿಯೆಯೇ ಇಲ್ಲವಾಯಿತು. ಮಾರ್ಚ್‌ ನಂತರದಲ್ಲಿ ಉದ್ಯೋಗ ಅವಕಾಶಗಳ ಪ್ರಮಾಣ ಶೇ 16ರಷ್ಟು ಕಡಿಮೆಯಾಗಿ 50 ಲಕ್ಷ ತಲುಪಿತು. ಕೆಲಸಕ್ಕೆ ತೆಗೆದುಕೊಳ್ಳುವ ಪ್ರಮಾಣ ಶೇ 31ರಷ್ಟು ಇಳಿಮುಖವಾಗಿ 35 ಲಕ್ಷ ತಲುಪಿದೆ ಎಂದು ಕಾರ್ಮಿಕರ ಇಲಾಖೆ ಹೇಳಿದೆ.

2019ರ ಸರಾಸರಿ ಉದ್ಯೋಗ ಸೃಷ್ಟಿಗೆ ಹೋಲಿಸಿದರೆ, ತಿಂಗಳ ಉದ್ಯೋಗ ಪಡೆಯುವ ಪ್ರಮಾಣ ಶೇ 60ರಷ್ಟಿದೆ. ಪ್ರತಿ ಒಂದು ಕೆಲಸದ ಅವಕಾಶಕ್ಕೆ 4.6 ನಿರುದ್ಯೋಗಿಗಳಿದ್ದಾರೆ.

ಏಪ್ರಿಲ್‌ ಕಠಿಣ ಪರಿಸ್ಥಿತಿಗೂ ಮುನ್ನ ಮಾರ್ಚ್‌ನಲ್ಲೇ 1.15 ಕೋಟಿ ಜನರು ಕೆಲಸ ಕಳೆದುಕೊಂಡಿದ್ದರು. ಸುಮಾರು ಹತ್ತು ವರ್ಷಗಳ ಗಳಿಕೆಯು 60 ದಿನಗಳಲ್ಲಿ ಕಳೆದು ಹೋಗಿದ್ದು, ಆರ್ಥಿಕತೆ ಚೇತರಿಕೆಗೆ ಹೆಚ್ಚಿನ ಸಮಯ ಅಗತ್ಯವಾಗಬಹುದು. ಮೇನಲ್ಲಿ 25 ಲಕ್ಷ ಉದ್ಯೋಗಗಳ ಅವಕಾಶ ತೆರೆದಿಕೊಂಡಿರುವುದಾಗಿ ಪ್ರಕಟಿಸಲಾಗಿದೆ. ಆದರೆ, ತಾತ್ಕಾಲಿಕವಾಗಿ ಉದ್ಯೋಗದಿಂದ ತೆಗೆದಿದ್ದ ನೌಕರರು ಮತ್ತೆ ಕೆಲಸಕ್ಕೆ ಮರಳುತ್ತಿದ್ದಾರೆ ಹಾಗೂ ಅರೆ ಕಾಲಿಕ ಕೆಲಸಗಾರರ ಸಂಖ್ಯೆ ಹೆಚ್ಚಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು