ಗುರುವಾರ , ಫೆಬ್ರವರಿ 20, 2020
27 °C

ಸಿಎಎ ಹೋರಾಟದ ಕೇಂದ್ರ ಬಿಂದು ಶಾಹೀನ್‌ ಬಾಗ್‌ ಇರುವ ಕ್ಷೇತ್ರದಲ್ಲಿ ಯಾರು ಮುಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾರಿ ಪ್ರತಿಭಟನೆ ನಡೆದ ಪ್ರದೇಶಗಳಿರುವ ಓಕ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಅಮಾನತ್‌ ಉಲ್ಲಾ ಖಾನ್‌ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ದೆಹಲಿಯ ಶಾಹೀನ್‌ ಬಾಗ್‌ ಮತ್ತು ಜಮಿಯಾ ನಗರ್‌ನಲ್ಲಿ ಸಿಎಎ ವಿರುದ್ಧ ಭಾರಿ ದೊಡ್ಡ ಹೋರಾಟಗಳು ನಡೆದಿದ್ದವು. ನಿತ್ಯವೂ ಅಲ್ಲಿ ಪ್ರತಿಭಟನೆಗಳು ನಡೆದಿವೆ. ಈ ಪ್ರದೇಶಗಳು ಓಕ್ಲಾ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿವೆ. 

ಈ ಹಿಂದೆ ಎಎಪಿ ಅಭ್ಯರ್ಥಿ ಅಮಾನತ್‌ ಉಲ್ಲಾ ಖಾನ್‌ ಅವರು ಈ ಕ್ಷೇತ್ರದಿಂದ ಶಾಸಕರಾಗಿದ್ದರು. ಈ ಬಾರಿಯೂ ಎಎಪಿಯಿಂದ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಭ್ರಹಂ ಸಿಂಗ್‌ ಅವರು ಸ್ಪರ್ಧಿಸಿದ್ದರು. ಆರಂಭಿಕ ಟ್ರೆಂಡ್‌ ಬಿಜೆಪಿ ಗೆಲ್ಲುವ ಮುನ್ಸೂಚನೆ ನೀಡಿತ್ತಾದರೂ, ನಂತರದಲ್ಲಿ ಅಮಾನತ್‌ ಉಲ್ಲಾ ಖಾನ್‌ ಅವರು ಮುನ್ನಡೆ ಸಾಧಿಸುವಲ್ಲಿ ಸಫಲರಾರು. 

ಸದ್ಯ ಅಮಾನತ್‌ ಉಲ್ಲಾ ಖಾನ್‌ ಅವರು ಗೆಲುವಿನತ್ತ ದಾಪುಗಾಲಿಟ್ಟಿದ್ದು, 20 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಹೊಂದಿದ್ದಾರೆ.  ಖಾನ್‌ 28,470 ಮತಗಳನ್ನು ಪಡೆದಿದ್ದರೆ, ಭ್ರಹಂ ಸಿಂಗ್‌ ಅವರು ಕೇವಲ 7,296 ಮತ ಪಡೆದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು