ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ: ಚೀನಾ ಆಕ್ಷೇಪ

7

ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ: ಚೀನಾ ಆಕ್ಷೇಪ

Published:
Updated:

ನವದೆಹಲಿ/ಬೀಜಿಂಗ್‌: ಅರುಣಾಚಲ ಪ್ರದೇಶಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವ ಬೆನ್ನಲ್ಲೇ ಚೀನಾ ಮತ್ತು ಭಾರತದ ನಡುವಿನ ಗಡಿ ಸಂಘರ್ಷ ಮತ್ತೆ ಭುಗಿಲೆದ್ದಿದೆ.

ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಮೊದಲಿನಿಂದಲೂ ವಾದಿಸುತ್ತಿರುವ ಚೀನಾ, ವಿವಾದಾತ್ಮಕ ಪ್ರದೇಶಕ್ಕೆ ಮೋದಿ ಭೇಟಿ ನೀಡಿರುವುದಕ್ಕೆ ತಕರಾರು ಎತ್ತಿದೆ.

‘ಗಡಿ ಪ್ರದೇಶಗಳ ಸೂಕ್ಷ್ಮ ವಿಷಯಗಳು ಭಾರತದ ರಾಜಕೀಯ ನಾಯಕರಿಗೆ ಅರ್ಥವಾಗುತ್ತಿಲ್ಲ. ಗಡಿ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಹೆಚ್ಚಿದರೆ ಗಡಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ’ ಎಂದು ಚೀನಾ, ಭಾರತಕ್ಕೆ ಎಚ್ಚರಿಕೆ ನೀಡಿದೆ.

‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಭಾರತದ ನಾಯಕರು ಇಲ್ಲಿಗೆ ಭೇಟಿ ನೀಡುವುದು ಸಹಜ ಪ್ರಕ್ರಿಯೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರುಗೇಟು ನೀಡಿದೆ.

‘ಚೀನಾ ಮತ್ತು ಭಾರತದ ನಡುವಿನ ಗಡಿರೇಖೆ ಕುರಿತಂತೆ ನಮ್ಮ ನಿಲುವು ಸ್ಥಿರ ಹಾಗೂ ಸ್ಪಷ್ಟವಾಗಿದೆ. ಅರುಣಾಚಲ ಪ್ರದೇಶಕ್ಕೆ ಭಾರತದ ನಾಯಕರು ಭೇಟಿಯನ್ನು ವಿರೋಧಿಸುತ್ತೇವೆ’ ಎಂದು ಚೀನಾ ವಿದೇಶಾಂಗ ಇಲಾಖೆ ಪ್ರತಿಭಟನೆ ವ್ಯಕ್ತಪಡಿಸಿದೆ.

ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಸುಮಾರು ₹4 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಚಾಲನೆ ನೀಡಿದರು.

ಪೌರತ್ವ ಮಸೂದೆಯಿಂದ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮೋದಿ ಭರವಸೆ ನೀಡಿದರು.

ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ

ಗಡಿ ವಿವಾದ ಇನ್ನು ಇತ್ಯರ್ಥವಾಗಿಲ್ಲ ಇಂತಹ ಸಂದರ್ಭದಲ್ಲಿ ಭಾರತೀಯ ನಾಯಕರು ಗಡಿಗೆ ಭೇಟಿ ಕೊಡುವುದು ಸಮಂಜಸವಲ್ಲ ಎಂದು ಚೀನಾ ಹೇಳಿದೆ. 

‘ಗಡಿಪ್ರದೇಶಗಳ ಗಂಭೀರತೆಯ ಬಗ್ಗೆ ಭಾರತದ ನಾಯಕರಿಗೆ ಅರ್ಥವಾಗಿಲ್ಲ, ಈ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಹೆಚ್ಚಿದರೆ, ಗಡಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ’ ಎಂದು ಚೀನಾದ ವಿದೇಶಾಂಗ ಇಲಾಖೆ ಅಕ್ಷೇಪ ವ್ಯಕ್ತಪಡಿಸಿದೆ.

‘ಚೀನಾ ಮತ್ತು ಭಾರತದ ಗಡಿರೇಖೆಯ ಕುರಿತಂತೆ ಚೀನಾದ ನಿಲುವು ಸ್ಥಿರ ಹಾಗೂ ಸ್ಪಷ್ಟವಾಗಿದೆ. ‘ಅರುಣಾಚಲಪ್ರದೇಶ’ವನ್ನು ಚೀನಾ ಸರ್ಕಾರ ಮೊದಲಿನಿಂದಲೂ ಪರಿಗಣಿಸಿಲ್ಲ, ಈ ಕಾರಣದಿಂದ ಎರಡು ರಾಷ್ಟ್ರಗಳ ಪೂರ್ವಭಾಗಕ್ಕೆ ಭಾರತದ ನಾಯಕರು ಭೇಟಿ ನೀಡುವುದನ್ನು ಚೀನಾ ವಿರೋಧಿಸುತ್ತದೆ’ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನ್ಯಿಂಗ್‌ ತಿಳಿಸಿದ್ದಾರೆ. 

ಅರುಣಾಚಲಪ್ರದೇಶ ದಕ್ಷಿಣ ಟಿಬೇಟ್‌ನ ಭಾಗವಾಗಿದೆ ಎಂದು ಚೀನಾ ಮೊದಲಿನಿಂದಲೂ ಪ್ರತಿಪಾದಿಸುತ್ತಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಇದುವರೆಗೆ 21 ಸುತ್ತಿನ ಮಾತುಕತೆ ನಡೆದಿದೆ. ಚೀನಾ–ಭಾರತ ನಡುವಣ 3,488 ಕಿ.ಮೀ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಕುರಿತಂತೆ ಉಭಯ ರಾಷ್ಟ್ರಗಳು ವಿವಾದ ಹೊಂದಿವೆ. ಇದೇ ಕಾರಣಕ್ಕೆ ಭಾರತ ರಾಜಕೀಯ ನಾಯಕರು ಈ ಭಾಗಕ್ಕೆ ಭೇಟಿ ನೀಡುವುದಕ್ಕೆ ಚೀನಾ ಅಸಮಾಧಾನ ವ್ಯಕ್ತಪಡಿಸುತ್ತಿದೆ.

ಅರುಣಾಚಲಕ್ಕೆ ಪ್ರಧಾನಿ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿರುವುದು ಉಭಯ ದೇಶಗಳ ನಡುವಿನ ಮಾತುಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಚೀನಾ ಹೇಳಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷರು ಪರಸ್ಪರ ಭೇಟಿ ಮಾಡಿ ಗಡಿ ವಿವಾದ ಕುರಿತಂತೆ ಚರ್ಚಿಸಿದ್ದರು. 

ಉಭಯ ದೇಶಗಳು ದ್ವಿಪಕ್ಷಿಯ ಸಂಬಂಧಗಳಿಗೆ ಆದ್ಯತೆ ನೀಡಬೇಕು, ವಿವಾದಿತ ಗಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬಾರದು ಎಂದು ಚೀನಾ ಹೇಳಿದೆ. 2017ರಲ್ಲಿ ಬೌದ್ಧ ಗುರು ದಲೈಲಾಮ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೂ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. 

‘ಗಡಿಪ್ರದೇಶಗಳ ಗಂಭೀರತೆಯ ಬಗ್ಗೆ ಭಾರತದ ನಾಯಕರಿಗೆ ಅರ್ಥವಾಗಿಲ್ಲ, ಈ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಹೆಚ್ಚಿದರೆ, ಗಡಿಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ’ ಎಂದು ಚೀನಾದ ವಿದೇಶಾಂಗ ಇಲಾಖೆ ಅಕ್ಷೇಪ ವ್ಯಕ್ತಪಡಿಸಿದೆ.

‘ಚೀನಾ ಮತ್ತು ಭಾರತದ ಗಡಿರೇಖೆಯ ಕುರಿತಂತೆ ಚೀನಾದ ನಿಲುವು ಸ್ಥಿರ ಹಾಗೂ ಸ್ಪಷ್ಟವಾಗಿದೆ. ‘ಅರುಣಾಚಲಪ್ರದೇಶ’ವನ್ನು ಚೀನಾ ಸರ್ಕಾರ ಮೊದಲಿನಿಂದಲೂ ಪರಿಗಣಿಸಿಲ್ಲ, ಈ ಕಾರಣದಿಂದ ಎರಡು ರಾಷ್ಟ್ರಗಳ ಪೂರ್ವಭಾಗಕ್ಕೆ ಭಾರತದ ನಾಯಕರು ಭೇಟಿ ನೀಡುವುದನ್ನು ಚೀನಾ ವಿರೋಧಿಸುತ್ತದೆ’ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನ್ಯಿಂಗ್‌ ತಿಳಿಸಿದ್ದಾರೆ. 

ಅರುಣಾಚಲ ಪ್ರದೇಶದಲ್ಲಿ ಸುಮಾರು ₹4 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ್ದರು. ಈ ಭಾಗದ ಮೂಲಸೌಕರ್ಯಕ್ಕೆ ಒತ್ತು ನೀಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದರು.

ಅರುಣಾಚಲಪ್ರದೇಶ ದಕ್ಷಿಣ ಟಿಬೇಟ್‌ನ ಭಾಗವಾಗಿದೆ ಎಂದು ಚೀನಾ ಮೊದಲಿನಿಂದಲೂ ಪ್ರತಿಪಾದಿಸುತ್ತಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಇದುವರೆಗೆ 21 ಸುತ್ತಿನ ಮಾತುಕತೆ ನಡೆದಿದೆ. ಚೀನಾ–ಭಾರತ ನಡುವಣ 3,488 ಕಿ.ಮೀ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಕುರಿತಂತೆ ಉಭಯ ರಾಷ್ಟ್ರಗಳು ವಿವಾದ ಹೊಂದಿವೆ. ಇದೇ ಕಾರಣಕ್ಕೆ ಭಾರತ ರಾಜಕೀಯ ನಾಯಕರು ಈ ಭಾಗಕ್ಕೆ ಭೇಟಿ ನೀಡುವುದಕ್ಕೆ ಚೀನಾ ಅಸಮಾಧಾನ ವ್ಯಕ್ತಪಡಿಸುತ್ತಿದೆ.

ಬಗೆಹರಿಯದ ಗಡಿ ವಿವಾದ

ಅರುಣಾಚಲ ಪ್ರದೇಶ ದಕ್ಷಿಣ ಟಿಬೇಟ್‌ ಭಾಗವಾಗಿದೆ ಎಂದು ಚೀನಾ ಮೊದಲಿನಿಂದಲೂ ಪ್ರತಿಪಾದಿಸುತ್ತಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಇದುವರೆಗೆ 21 ಸುತ್ತಿನ ಮಾತುಕತೆ ನಡೆದಿದೆ.

ಚೀನಾ–ಭಾರತ ನಡುವಿನ 3,488 ಕಿ.ಮೀ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಗ್ಗೆ ಉಭಯ ರಾಷ್ಟ್ರಗಳು ವಿವಾದ ಹೊಂದಿವೆ.

ಇದೇ ಕಾರಣಕ್ಕೆ ಭಾರತ ರಾಜಕೀಯ ನಾಯಕರು ಈ ಭಾಗಕ್ಕೆ ಭೇಟಿ ನೀಡುವುದಕ್ಕೆ ಚೀನಾ ಅಸಮಾಧಾನ ವ್ಯಕ್ತಪಡಿಸುತ್ತಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !