ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಎಲ್ಲರನ್ನು ಡೂಡಲ್‌ ಮೂಲಕ ಸ್ಮರಿಸಿದ ಗೂಗಲ್‌

Last Updated 18 ಏಪ್ರಿಲ್ 2020, 10:16 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ಮಹಾಮಾರಿಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ಗೂಗಲ್‌ ತನ್ನ ಡೂಡಲ್‌ ಮೂಲಕ ಧನ್ಯವಾದ ಅರ್ಪಿಸಿದೆ.

ಕೋವಿಡ್‌ ಭೀತಿ, ಲಾಕ್‌ಡೌನ್‌ ನಡುವೆಯೂ ಅಗತ್ಯ ಸೇವೆಗಳನ್ನು ಪೂರೈಸಲು ಶ್ರಮಿಸುತ್ತಿರುವ ಎಲ್ಲ ರಂಗದವರನ್ನು ಏಪ್ರಿಲ್ 6ರಿಂದ 18ರ ವರೆಗೆ ಗೂಗಲ್‌ ತನ್ನ ಡೂಡಲ್‌ ಮೂಲಕ ಸ್ಮರಿಸಿದೆ. ಇಂದು ಆ ಎಲ್ಲ ಡೂಡಲ್‌ಗಳನ್ನೂ ಒಟ್ಟಿಗೆ ಪ್ರಕಟಿಸುವ ಮೂಲಕ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದೆ.

ಜನರ ಅಗತ್ಯ ಸೇವೆಗಳನ್ನು ಪೂರೈಸಲು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡಿರುವವರ ಶ್ರಮವನ್ನು ಗೂಗಲ್‌ನ ಡೂಡಲ್‌ಗಳು ಪ್ರತಿಬಿಂಬಿಸಿವೆ. ವೈದ್ಯರು–ಆರೋಗ್ಯ ಕಾರ್ಯಕರ್ತರು, ಪೌರ, ನೈರ್ಮಲ್ಯ ಕಾರ್ಮಿಕರು, ರೈತರು, ಆಹಾರ ಪೂರೈಕೆದಾರರು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ, ಸಾರ್ವಜನಿಕ ಸಾರಿಗೆಗೆ ನೌಕರರು, ವಿವಿಧ ವಸ್ತುಗಳನ್ನು ತಂದುಕೊಡುವವರ ಕಷ್ಟಗಳನ್ನು ಡೂಡಲ್‌ ಚಿತ್ರಿಸಿದೆ. ‌

ಇದಿಷ್ಟೇ ಅಲ್ಲ, ವರ್ಕ್‌ ಫ್ರಮ್‌ ಹೋಂನಲ್ಲಿ ತೊಡಗಿರುವ ನೌಕರ ವರ್ಗ, ವಿಡಿಯೊ ಕಾಲ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಶಿಕ್ಷಕರನ್ನೂ ಡೂಡಲ್‌ಗಳು ಒಳಗೊಂಡಿವೆ.

ಕೊರೊನಾ ವೈರಸ್‌ ವಿರುದ್ದ ಹೋರಾಡುತ್ತಿರುವವರ ಕುರಿತು ಏ. 6ರಿಂದ ಪ್ರಕಟವಾಗುತ್ತಿರುವ ಸುಂದರ ಡೂಡಲ್‌ಗಳ ಮೇಲೆ ಕರ್ಸರ್ ಆಡಿಸಿದರೆ, ಅಲ್ಲಿ "To all coronavirus helpers, thank you," ಎಂಬ ಸಂದೇಶವೂ ಮೂಡುತ್ತಿದೆ.

ಅಗತ್ಯ ಸೇವೆಯಲ್ಲಿ ತೊಡಗಿರುವ ಒಂದೊಂದೇ ರಂಗದವರನ್ನು ಗೂಗಲ್‌ ಈ ವರೆಗೆ ಸ್ಮರಿಸಿತ್ತು. ಆದರೆ, ಇಂದು ಎಲ್ಲ ಡೂಡಲ್‌ಗಳನ್ನೂ ಸಂಕಲಿಸುವ ಮೂಲಕ ಎಲ್ಲರಿಗೂಒಮ್ಮೆಗೇ ಕೃತಜ್ಞತೆ ಸಲ್ಲಿಸುವ ಪ್ರಯತ್ನ ಮಾಡಿದೆ.

ಕೊರೊನಾ ವೈರಸ್ ಕಾರಣದಿಂದಾಗಿ ಭಾರತದಲ್ಲಿ ಮೇ 3 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಸದ್ಯ ದೇಶದಲ್ಲಿ 14,378 ಮಂದಿ ಸೋಂಕಿತರಿದ್ದು, 480 ಮಂದಿ ಮೃತಪಟ್ಟಿದ್ದಾರೆ. ಜಾಗತಿಕವಾಗಿ 22,61,037 ಮಂದಿ ಸೋಂಕಿತರಿದ್ದರೆ, 1,54,726 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT