ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಗೂಲಿ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ನೆಟ್‌ಫ್ಲಿಕ್ಸ್‌: ₹7.5 ಕೋಟಿ ದೇಣಿಗೆ

Last Updated 4 ಏಪ್ರಿಲ್ 2020, 6:30 IST
ಅಕ್ಷರ ಗಾತ್ರ

ದೇಶದ ಮನರಂಜನಾ ಉದ್ಯಮದಲ್ಲಿ ದೈನಂದಿನ ವೇತನದ ಮೇಲೆ ಜೀವನ ಸಾಗಿಸುತ್ತಿರುವ ಕಾರ್ಮಿಕರಿಗೆ ಸಹಾಯವಾಗಲು ವೆಬ್‌ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ₹7.5 ಕೋಟಿಗಳನ್ನು ನೀಡುವುದಾಗಿ ಘೋಷಿಸಿದೆ.

ಕೊರೊನಾ ವೈರಸ್‌ ಸೋಂಕು ಹರಡುವಿಕೆ ತಡೆಗಟ್ಟುವ ಸಂಬಂಧ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದ್ದು, ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರ ಬದುಕು ಸಂಕಷ್ಟದಲ್ಲಿದೆ.

ಆ ಕಾರಣ ನೆಟ್‌ಫ್ಲಿಕ್ಸ್‌ ಸಂಸ್ಥೆಯು ಕಾರ್ಮಿಕರಿಗೆ ಸಹಾಯವಾಗಲೆಂದು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ (ಪಿಜಿಐ) ರಿಲೀಫ್ ಫಂಡ್‌ಗೆ ‍₹7.5 ಕೋಟಿ ರೂ.ಗಳ ದೇಣಿಗೆ ನೀಡುವುದಾಗಿ ಶನಿವಾರ ಪ್ರಕಟಿಸಿದೆ.

ಭಾರತೀಯ ಮನರಂಜನಾ ಉದ್ಯಮದಲ್ಲಿ ಸಾವಿರಾರು ಜನರು ದೈನಂದಿನ ವೇತನ ಪಡೆಯುತ್ತಿದ್ದಾರೆ. ಲಾಕ್‌ಡೌನ್‌ ನಂತರ ದೇಶದಲ್ಲಿ ಚಲನಚಿತ್ರ ಟಿವಿ ಮತ್ತು ವೆಬ್ ಸಿರೀಸ್‌ ತಯಾರಿಕೆ ನಿಂತುಹೋಗಿದೆ. ಇದು ಕಾರ್ಮಿಕರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ.

'ಟಿವಿ ಕಾರ್ಯಕ್ರಮ ಮತ್ತು ಚಲನಚಿತ್ರ ನಿರ್ಮಾಣ ಕ್ರಿಯೆಗಳಲ್ಲಿ ತೊಡಗುವ ಕೆಲಸಗಾರರಿಗೆ ಸಹಾಯವಾಗಲು ಈ ಪರಿಹಾರ ಧನ ನೀಡಲಾಗುವುದು. ನೆಟ್‌ಫ್ಲಿಕ್ಸ್‌ ಯಶಸ್ಸಿನಲ್ಲಿ ಭಾರತದ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ' ಎಂದು ನೆಟ್‌ಫ್ಲಿಕ್ಸ್‌ ಸಂಸ್ಥೆ ತಿಳಿಸಿದೆ.

'ನೆಟ್‌ಫ್ಲಿಕ್ಸ್‌ ನೀಡುತ್ತಿರುವ ಪರಿಹಾರದ ಹಣವನ್ನು ಗೌರವಯುತವಾಗಿ ಸ್ವೀಕರಿಸುತ್ತೇವೆ. ನೆಟ್‌ಫ್ಲಿಕ್ಸ್‌ಗೆ ಧನ್ಯವಾದ ತಿಳಿಸುತ್ತೇವೆ' ಎಂದು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಅಧ್ಯಕ್ಷ ಸಿದ್ಧಾರ್ಥ್ ರಾಯ್ ಕಪೂರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT