ಗುರುವಾರ , ಜುಲೈ 16, 2020
24 °C

ಏರ್ ಇಂಡಿಯಾ ಪೈಲಟ್‌ಗೆ ಕೋವಿಡ್‌–19:ದೆಹಲಿಯಿಂದ ಮಾಸ್ಕೊಗೆ ಹೊರಟಿದ್ದ ವಿಮಾನ ವಾಪಸ್

ಪಿಟಿಐ Updated:

ಅಕ್ಷರ ಗಾತ್ರ : | |

ಏರ್‌ ಇಂಡಿಯಾ ವಿಮಾನ–ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯಿಂದ ಮಾಸ್ಕೊಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಅರ್ಧ ಹಾದಿ ತಲುಪಿ ಹಿಂದಿರುಗಿರುವ ಘಟನೆ ಶನಿವಾರ ನಡೆದಿದೆ.

ವಿಮಾನದ ಪೈಲಟ್‌ ಒಬ್ಬರಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿರುವುದನ್ನು ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಖಚಿತ ಪಡಿಸಿಕೊಂಡ ಬೆನ್ನಲ್ಲೇ ವಿಮಾನ ವಾಪಸ್‌ ಕರೆಸಿಕೊಳ್ಳಲಾಗಿದೆ. 

'ಲಾಕ್‌ಡೌನ್‌ನಿಂದಾಗಿ ಮಾಸ್ಕೊದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾದ ಎ320 ವಿಮಾನ ದೆಹಲಿಯಿಂದ ಹೊರಟಿದೆ. ಕೇಂದ್ರ ಸರ್ಕಾರದ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಭಾರತೀಯರನ್ನು ಕರೆತರಲು ಖಾಲಿ ವಿಮಾನ ತೆರಳಿತ್ತು. ಅನಂತರದಲ್ಲಿ ಪೈಲಟ್‌ ಒಬ್ಬರಿಗೆ ಕೋವಿಡ್‌–19 ದೃಢಪಟ್ಟಿರುವುದನ್ನು ನಿಲ್ದಾಣದಲ್ಲಿದ್ದ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಗಮನಿಸಿದ್ದಾರೆ. ಅದಾಗಲೇ ಉಜ್ಬೆಕಿಸ್ತಾನ್ ವಾಯು ವಲಯ ತಲುಪಿದ್ದ ವಿಮಾನವನ್ನು ವಾಪಸ್‌ ಕರೆಸಿಕೊಳ್ಳಲಾಗಿದೆ' ಎಂದು ಏರ್‌ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿಮಾನ ಶನಿವಾರ ಮಧ್ಯಾಹ್ನ 12:30ಕ್ಕೆ ದೆಹಲಿಗೆ ಮರಳಿದೆ. ವಿಮಾನ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. 

ಅಧಿಕಾರಿಗಳ ಪ್ರಕಾರ, ಸಿಲುಕಿರುವ ಭಾರತೀಯರನ್ನು ಕರೆತರಲು ಮತ್ತೊಂದು ವಿಮಾನವನ್ನು ಮಾಸ್ಕೊಗೆ ಕಳುಹಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು