ನವದೆಹಲಿ: ಸಿಕ್ಕಿಂನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತ–ಚೀನಾ ಸೇನಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿದ್ದು, ಉಭಯ ದೇಶಗಳ ಹಲವು ಯೋಧರು ಗಾಯಗೊಂಡಿದ್ದಾರೆ. ಉತ್ತರ ಸಿಕ್ಕಿಂನ ನಾಕು ಲಾ ಸೆಕ್ಟರ್‌ನಲ್ಲಿ ಘಟನೆ ನಡೆದಿದೆ.

‘ಉಭಯ ಕಡೆಗಳ ಸೇನಾ ಪಡೆಗಳ ಮಧ್ಯೆ ಮುಖಾಮುಖಿ ಸಂಭವಿಸಿದೆ. ಎರಡೂ ಕಡೆಯ ಹಲವು ಯೋಧರು ಗಾಯಗೊಂಡಿದ್ದಾರೆ. ಸ್ಥಳೀಯ ಮಟ್ಟದ ಮಾತುಕತೆ, ಸಂಧಾನದ ಮೂಲಕ ಘರ್ಷಣೆ ತಿಳಿಗೊಳಿಸಲಾಗಿದೆ’ ಎಂದು ಸೇನಾ ಮೂಲಗಳು ತಿಳಿಸಿವೆ.

‘ಇದೊಂದು ತಾತ್ಕಾಲಿಕ ಮುಖಾಮುಖಿಯಷ್ಟೆ. ಉಭಯ ರಾಷ್ಟ್ರಗಳ ನಡುವಣ ದೀರ್ಘಾವಧಿಯ ಗಡಿ ಸಮಸ್ಯೆ ಬಗೆಹರಿಯದ ಕಾರಣ ಇಂತಹ ಘಟನೆಗಳು ಆಗಾಗ ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಪರಸ್ಪರ ಶಿಷ್ಟಾಚಾರ ಪಾಲಿಸುವ ಮೂಲಕ ಉಭಯ ದೇಶಗಳ ಪಡೆಗಳು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿವೆ’ ಎಂದು ಮೂಲಗಳು ಹೇಳಿವೆ.

ಭಾರತ–ಚೀನಾ ಗಡಿ ಸಮಸ್ಯೆಯ ಹಿನ್ನೆಲೆ ತಿಳಿಯಲು ಓದಿ:ಭಾರತ–ಚೀನಾ ಗಡಿ: ಗಡಿಬಿಡಿಯ ಸುತ್ತ

ಈ ಕುರಿತ ಅಧಿಕೃತ ಹೇಳಿಕೆಯನ್ನು ಸೇನೆಯ ಪೂರ್ವ ಕಮಾಂಡ್ ಇಂದು ಸಂಜೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದೂ ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ಹಿಂದೆ ಲಡಾಕ್‌ನ ಪೇಂಗಾಂಗ್ ಸರೋವರ ಪ್ರದೇಶದ ಬಳಿ 2017ರ ಆಗಸ್ಟ್‌ನಲ್ಲಿ ಇಂತಹದ್ದೇ ಮುಖಾಮುಖಿ ಘರ್ಷಣೆ ಸಂಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.