ಶನಿವಾರ, ಏಪ್ರಿಲ್ 17, 2021
32 °C

ಗುಜರಾತ್‌: ಮತಾಂತರಕ್ಕೆ ಮುಂದಾದ ಹಿಂದೂಗಳು

ಪಿಟಿಐ Updated:

ಅಕ್ಷರ ಗಾತ್ರ : | |

ಗಾಂಧಿನಗರ: ಗುಜರಾತ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ 911 ಮಂದಿ ಮತಾಂತರಕ್ಕೆ ಅನುಮತಿ ಕೋರಿದ್ದು, 689 ಮಂದಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾಣಿ ತಿಳಿಸಿದ್ದಾರೆ.

’ಮತಾಂತರಕ್ಕೆ ಅನುಮತಿ ಕೋರಿದವರಲ್ಲಿ 863 ಹಿಂದೂಗಳು, 35 ಮುಸ್ಲಿಮರು, 11 ಕ್ರೈಸ್ತರು, ಖೋಜಾ ಸಮುದಾಯದ ಒಬ್ಬರು ಮತ್ತು ಬೌದ್ಧ ಧರ್ಮದ ಒಬ್ಬರು ಸೇರಿದ್ದಾರೆ’ ಎಂದು ರೂಪಾಣಿ ವಿಧಾನಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

‘ಹಿಂದೂಗಳಲ್ಲಿ ಮತಾಂತರ ಹೊಂದಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕರು ಸೂರತ್‌ ಜಿಲ್ಲೆಯವರು. ಇಲ್ಲಿನ 474 ಹಿಂದೂಗಳು ಮತಾಂತರಕ್ಕೆ ಅನುಮತಿ ಕೋರಿದ್ದರು. ಜುನಾಗಢ ಜಿಲ್ಲೆಯ 152 ಮತ್ತು ಆನಂದ್‌ ಜಿಲ್ಲೆಯ 61 ಮಂದಿ ಅನುಮತಿ ಕೋರಿದ್ದರು’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕರು ಕೇಳಿದ ಪ್ರಶ್ನೆಗಳಿಗೆ ಅವರು ಈ ಉತ್ತರ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು