ಮಂಗಳವಾರ, ಜನವರಿ 21, 2020
23 °C

ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ಲಭಿಸಿತು : ತೆಲಂಗಾಣ ಪಶುವೈದ್ಯೆಯ ಅಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Telangana Police

ನವದೆಹಲಿ: ತೆಲಂಗಾಣ ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳನ್ನು ಪೊಲೀಸ್ ಎನ್‌ಕೌಂಟರ್ ಮಾಡಿರುವ ಸುದ್ದಿಗೆ ಪ್ರತಿಕ್ರಿಯಿಸಿದ ಸಂತ್ರಸ್ತೆಯ ಅಪ್ಪ ನನ್ನ ಮಗಳ ಆತ್ಮಕ್ಕೆ ಶಾಂತಿ ಲಭಿಸಿತು ಎಂದು ಹೇಳಿದ್ದಾರೆ. 

ನವೆಂಬರ್ 27ರಂದು ಪಶು ವೈದ್ಯೆಯ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು.

ಇದನ್ನೂ ಓದಿ:  ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್

ನನ್ನ ಮಗಳ ಹತ್ಯೆಯಾಗಿ 10 ದಿನ ಆಯ್ತು. ಪೊಲೀಸ್ ಮತ್ತು ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ಲಭಿಸಿರಬಹುದು ಎಂದು  ಸಂತ್ರಸ್ತೆಯ ಅಪ್ಪ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.  

ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ| ಕನ್ನಡಿಗ ವಿಶ್ವನಾಥ್‌ ಸಜ್ಜನರಿಂದ ಎನ್‌ಕೌಂಟರ್‌

ಅತ್ಯಾಚಾರವೆಸಗಿದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿರುವ ಸೈಬೆರಾಬಾದ್ ಪೊಲೀಸರನ್ನು ಅಭಿನಂದಿಸಿದ ನಿರ್ಭಯಾಳ ಅಮ್ಮ ಆಶಾದೇವಿ, ಎನ್‌ಕೌಂಟರ್  ಮಾಡಿದ  ಪೊಲೀಸರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದಿದ್ದಾರೆ.

 ಈ ಶಿಕ್ಷೆ ಬಗ್ಗೆ ಖುಷಿಯಾಗಿದೆ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ  ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದಿದ್ದಾರೆ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನಿರ್ಭಯಾಳ ಅಮ್ಮ. 

ಇದನ್ನೂ ಓದಿ:  ಪಶು ವೈದ್ಯೆ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ: ವ್ಯಾಪಕ ಆಕ್ರೋಶ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು