ಭಾನುವಾರ, ಏಪ್ರಿಲ್ 5, 2020
19 °C

ಟ್ವಿಟರ್‌ನಲ್ಲಿ ಮಹಿಳಾ ದಿನದ ಸಂಭ್ರಮ, ಇಂಟರೆಸ್ಟಿಂಗ್ ಟ್ವೀಟ್‌ಗಳು ಇಲ್ಲಿವೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ವಿಶ್ವದಾದ್ಯಂತ ಅಂತರರಾಷ್ಟ್ರೀಯ ವಿಶ್ವ ಮಹಿಳಾ ದಿನವನ್ನು ಆಚರಿಸುತ್ತಿದ್ದು, ಟ್ವಿಟರ್‌ನಲ್ಲಿ #HappyWomensDay2020 ಮತ್ತು #InternationalWomensDay ಹ್ಯಾಷ್‌ಟ್ಯಾಗ್‌ಗಳು ಟ್ರೆಡಿಂಗ್ ಆಗಿವೆ.

#EachforEqual (ಸಮಾನತೆಗಾಗಿ ಎಲ್ಲರೂ) ಅಡಿಯಲ್ಲಿ ಈ ಬಾರಿಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. 

ಮಹಿಳೆಯರೂ ಯಾವಾಗಲೂ ಕುಟುಂಬ ಮತ್ತು ಸಮಾಜದ ಸ್ಫೂರ್ತಿಯ ಮೂಲವಾಗಿರುತ್ತಾರೆ. ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಮಿ.ಫರ್ಫೆಕ್ಟ್ ಎನ್ನುವ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಒಬ್ಬ ಮಹಿಳೆಯು ಕಷ್ಟವನ್ನು ಶಕ್ತಿಯಿಂದ ಸೆಳೆಯುತ್ತಾಳೆ, ಕಷ್ಟದ ಸಮಯದಲ್ಲಿ ನಗುತ್ತಾಳೆ ಮತ್ತು ಪ್ರಾರ್ಥನೆಯೊಂದಿಗೆ ಬಲವಾಗಿ ಬೆಳೆಯುತ್ತಾಳೆ. ನಾರಿಗೆ ಅನೇಕ ರೂಪಗಳಿವೆ. ಆಕೆಯ ರೂಪಗಳಿಗೆ ನನ್ನ ನಮನಗಳು. ಮಹಿಳಾ ದಿನಾಚರಣೆಯ ಶುಭಾಶಯಗಳು. ವಿಶೇಷ ಸೂಚನೆ: ಇದು ಇಂದಿಗೆ ಮಾತ್ರವಲ್ಲ, ಪ್ರತಿದಿನವೂ ಆಕೆಯನ್ನು ಗೌರವಿಸಿ. ಆಕೆಯು ಪ್ರೀತಿ ಮತ್ತು ಕಾಳಜಿಯ ಸಾಗರವಾಗಿದ್ದಾಳೆ ಎಂದು ರಿಷಬ್ ಅಗರ್‌ವಾಲ್ ಎನ್ನುವವರು ಬರೆದುಕೊಂಡಿದ್ದಾರೆ. ಇದರೊಂದಿಗೆ 10 ಕೈಗಳಿರುವ, ಪ್ರತಿ ಕೈಯಲ್ಲೂ ಒಂದೊಂದು ಕೆಲಸದ ಪ್ರತಿರೂಪದಂತೆ ವಸ್ತುವನ್ನು ಹಿಡಿದಿರುವ ಮತ್ತು ಕಂಕುಳಲ್ಲಿ ಮಗುವನ್ನು, ತಲೆಯ ಮೇಲೆ ಕಟ್ಟಿಗೆಯನ್ನು ಹೊತ್ತುಕೊಂಡಿರುವ ಫೋಟೊವನ್ನು ಶೇರ್ ಮಾಡಿದ್ದಾರೆ. 

ಜಯಶ್ರೀ ಸಿಂಗ್ ಎನ್ನುವವರು ಟ್ವೀಟ್ ಮಾಡಿ, ಎಲ್ಲಿ ಮಹಿಳೆಯಿರುತ್ತಾಳೋ ಅಲ್ಲಿ ಮ್ಯಾಜಿಕ್ ಇರುತ್ತದೆ ಎಂದು ಮಹಿಳಾ ದಿನದ ಶುಭಾಶಯ ಕೋರಿದ್ದಾರೆ.

ಅವಳು ಕನಸುಗಾರಳು, ಅವಳು ನಂಬಿಕೆಯುಳ್ಳವಳು, ಅವಳು ಏನನ್ನಾದರೂ ಮಾಡುವವಳು ಮತ್ತು ಅವಳೆಂದರೆ ನೀನೆ. ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು ಎಂದು ಸುರೇಶ್ ಕುಮಾರ್ ರಾಯ್ ಎನ್ನುವವರು ಟ್ವೀಟ್ ಮಾಡಿದ್ದಾರೆ. 

ಪುಲ್ವಾಮಾ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್ ಅವರ ಪತ್ರಿ ಭಾರತೀಯ ಸೇನೆಯನ್ನು ಸೇರಲು ನಿರ್ಧರಿಸಿದ್ದಾರೆ. ಹ್ಯಾಪಿ ವುಮೆನ್ಸ್ ಡೇ ಎಂದು ಮೇಜರ್ ಪತ್ನಿಯ ಫೋಟೊವನ್ನು ಸರ್ ಜಡೇಜಾ ಫ್ಯಾನ್ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. 

ಟ್ವಿಟರ್‌ನಲ್ಲಿ ಮಹಿಳಾ ದಿನದ ಅಂಗವಾಗಿ ವಿಶಿಷ್ಠವಾಗಿ ಟ್ವೀಟ್ ಮಾಡಿದ ಕೆಲವರ ಇಂಟರೆಸ್ಟಿಂಗ್ ಟ್ವೀಟ್‌ಗಳು ಇಲ್ಲಿವೆ...

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು