ಶುಕ್ರವಾರ, ಜನವರಿ 22, 2021
28 °C

ಜೆಎನ್‌ಯು ಹಿಂಸಾಚಾರದಲ್ಲಿ ಎಡಪಕ್ಷಗಳ ಕೈವಾಡ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prakash Javadekar

ನವದೆಹಲಿ: ಎಬಿವಿಪಿ ಸಂಘಟನೆಗೆ ಅಪಖ್ಯಾತಿಯುಂಟು ಮಾಡುವುದಕ್ಕಾಗಿ ದುರುದ್ದೇಶದ ಪ್ರಚಾರ ನಡೆಸಲಾಗಿತ್ತು.ಆದರೆ ದೆಹಲಿ ಪೊಲೀಸರು ಸ್ಪಷ್ಟ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಜನವರಿ 5ರಂದು ಸಂಜೆ ದೆಹಲಿಯ ಜೆಎನ್‌ಯು ವಿಶ್ವವಿದ್ಯಾನಿಲಯದೊಳಗೆ ನುಗ್ಗಿ ಮುಸುಕುಧಾರಿಗಳು ದಾಂದಲೆ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ 9 ಮಂದಿ ಶಂಕಿತ ಆರೋಪಿಗಳ ಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದರು. ಇದರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಸೇರಿದಂತೆ ಎಐಎಸ್‌ಎ ಸಂಘಟನೆಯ ಏಳು ಮಂದಿ ಮತ್ತು ಎಬಿವಿಪಿ ಸಂಘಟನೆಯ ಇಬ್ಬರ ಚಿತ್ರಗಳಿವೆ.

ಇದನ್ನೂ ಓದಿನನ್ನ ಮೇಲೆ ಹಲ್ಲೆ ನಡೆದಿದೆ ಎಂಬುದಕ್ಕೆ ಸಾಕ್ಷ್ಯವಿದೆ: ಆಯಿಷಿ ಘೋಷ್‌ 

ಕಳೆದ 5 ದಿನಗಳಿಂದ ಎಬಿವಿಪಿ, ಬಿಜೆಪಿ ಮತ್ತು ಇತರರನ್ನು ದೂರಲಾಗುತ್ತಿತ್ತು. ಅದು ಸರಿಯಲ್ಲ ಎಂಬುದನ್ನು ಪೊಲೀಸರು ತೋರಿಸಿದ್ದಾರೆ. ಜೆಎನ್‌ಯುನಲ್ಲಿ ಸಿಸಿಟಿವಿ ಹಾಳುಗೆಡಹಿ, ಸರ್ವರ್‌ನ್ನು ನಾಶ ಮಾಡಿ ಪೂರ್ವಯೋಜಿತ ಕೃತ್ಯವೆಸಗಿದ್ದು ಎಡಪಂಥೀಯ ಸಂಘಟನೆಗಳು  ಎಂದು ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. 

ಜೆಎನ್‌ಯು ವಿದ್ಯಾರ್ಥಿಗಳು ಹೋರಾಟವನ್ನು ನಿಲ್ಲಿಸಿ ತರಗತಿ ನಡೆಸಲು ಬಿಡಬೇಕು. ತನಿಖೆಗೆ ಸಹಕರಿಸಬೇಕು. ಸಿಪಿಎಂ, ಸಿಪಿಐ, ಎಎಪಿ ಮೊದಲಾದ ಪಕ್ಷಗಳನ್ನು ಲೋಕಸಭಾ ಚುನಾವಣೆಯಲ್ಲಿ ಜನರು ತಿರಸ್ಕರಿಸಿದ್ದಾರೆ. ಹಾಗಾಗಿ ಈ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ ವಿದ್ಯಾರ್ಥಿಗಳನ್ನು ಬಳಸುತ್ತಿದ್ದಾರೆ ಎಂದು  ಜಾವಡೇಕರ್  ಹೇಳಿದ್ದಾರೆ.

ಜೆಎನ್‌ಯುನಲ್ಲಿ ಎಡಪಕ್ಷಗಳ ಮುಖವಾಡ ಕಳಚಿದೆ. ಅವರು ಅಲ್ಲಿ ದಾಂದಲೆ ನಡೆಸಿದರು. ತೆರಿಗೆದಾರರ ಹಣ ಬಳಸಿರುವ ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡಿದರು. ನೂತನ ವಿದ್ಯಾರ್ಥಿಗಳ ದಾಖಲಾತಿಗೆ ಅಡ್ಡಿಪಡಿಸಿದರು. ಅವರು ಕ್ಯಾಂಪಸ್‌ನ್ನು ರಾಜಕೀಯ ಸಮರಭೂಮಿಯನ್ನಾಗಿ ಮಾಡಿಕೊಂಡರು.  ಜೆಎನ್‌ಯು ಹಿಂಸಾಚಾರದಲ್ಲಿ ಎಡಪಕ್ಷಗಳ ಕೈವಾಡ ಇದೆ ಎಂಬುದು ದೆಹಲಿ ಪೊಲೀಸರು ಸಾಕ್ಷ್ಯ ಬಿಡುಗಡೆ ಮಾಡಿದ್ದರಿಂದ ಎಲ್ಲರಿಗೂ ಗೊತ್ತಾಗಿದೆ ಎಂದು ಸ್ಮೃತಿ ಇರಾನಿ ಟ್ವೀಟಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು