ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತನ್ನು ಆವರಿಸಿದೆ ಯುದ್ಧದ ಕಾರ್ಮೋಡ: ಶಸ್ತ್ರಾಸ್ತ್ರ ವ್ಯಾಪಾರ ಲೆಕ್ಕಾಚಾರ

Last Updated 6 ಜನವರಿ 2020, 1:30 IST
ಅಕ್ಷರ ಗಾತ್ರ
ADVERTISEMENT
""

ಡ್ರೋನ್‌ ದಾಳಿ ಮೂಲಕ ಇರಾನ್‌ನ ಸೇನಾ ಕಮಾಂಡರ್‌ ಸುಲೇಮಾನಿಯನ್ನು ಅಮೆರಿಕವು ಹತ್ಯೆ ಮಾಡಿದ ನಂತರ ಮಧ್ಯಪ್ರಾಚ್ಯದಲ್ಲಿ ಪುನಃ ಯುದ್ಧದ ಕಾರ್ಮೋಡ ಆವರಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುವ ಯುದ್ಧದ ಪರಿಣಾಮವು ಆ ದೇಶಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಜಗತ್ತಿನ ಹಲವು ರಾಷ್ಟ್ರಗಳಿಗೆ ತೈಲ ಸರಬರಾಜು ಆಗುವುದು ಇಲ್ಲಿಂದಲೇ. ಆದ್ದರಿಂದ ಇಲ್ಲಿ ನಡೆಯುವ ಯುದ್ಧವು ಹಲವು ರಾಷ್ಟ್ರಗಳ ಆರ್ಥಿಕತೆಯನ್ನು ತಲೆಕೆಳಗಾಗಿಸುತ್ತದೆ.

ತೈಲದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಅಥವಾ ಇನ್ಯಾವುದೋ ರಾಜಕಿಯ ಉದ್ದೇಶಕ್ಕಾಗಿ ಇಲ್ಲಿಯ ರಾಷ್ಟ್ರಗಳ ಮೇಲೆ ದಾಳಿಗಳು ನಡೆದದ್ದಿದೆ. ಸುಲೇಮಾನಿ ಹತ್ಯೆಯ ಹಿಂದೆಯೂ ಅಮೆರಿಕದ ರಾಜಕೀಯದ ಛಾಯೆ ಇದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಇಲ್ಲಿನ ಮುಸ್ಲಿಂ ರಾಷ್ಟ್ರಗಳ ಮಧ್ಯೆ ಶಿಯಾ, ಸುನ್ನಿ ಪಂಗಡಗಳ ಘರ್ಷಣೆ ದಶಕಗಳಿಂದ ನಡೆಯುತ್ತಿದೆ. ಈ ಆಂತರಿಕ ಘರ್ಷಣೆಯ ಲಾಭವನ್ನು ಜಗತ್ತಿನ ಇತರ ಪ್ರಬಲ ರಾಷ್ಟ್ರಗಳು ಪಡೆಯುತ್ತಿವೆ ಎಂದೂ ಆರೋಪಿಸಲಾಗುತ್ತಿದೆ. ನಿರಂತರ ಯುದ್ಧದ ಕಾರಣದಿಂದಲೇ ಮಧ್ಯಪ್ರಾಚ್ಯವು ಶಸ್ತ್ರಾಸ್ತ್ರ ವ್ಯಾಪಾರದ ಪ್ರಮುಖ ಕೇಂದ್ರವೂ ಆಗಿದೆ

****

ಜಗತ್ತಿನ ಶಸ್ತ್ರಾಸ್ತ್ರ ತಯಾರಿಕೆ ಹಾಗೂ ಮಿಲಿಟರಿ ಸೇವಾ ಸಂಸ್ಥೆಗಳ ಮುಂಚೂಣಿಯ 100 ಕಂಪನಿಗಳ (ಚೀನಾದ ಕಂಪನಿಗಳನ್ನು ಬಿಟ್ಟು) ಒಟ್ಟಾರೆ ಆದಾಯವು 2018ರಲ್ಲಿ ಶೇ 4.6ರಷ್ಟು ಏರಿಕೆಯಾಗಿದೆ.

* ₹ 30.14 ಲಕ್ಷ ಕೋಟಿ-2018ರಲ್ಲಿ ಮುಂಚೂಣಿಯ 100 ಕಂಪನಿಗಳು ದಾಖಲಿಸಿದ ವಹಿವಾಟು

* 47% -2002ರ ನಂತರ ಈ ಕಂಪನಿಗಳ ರಫ್ತು ಪ್ರಮಾಣದಲ್ಲಿ ಆಗಿರುವ ಏರಿಕೆ

ಅತಿ ಹೆಚ್ಚು ಶಸ್ತ್ರಾಸ್ತ್ರ ತಯಾರಿಸುವ 10 ಕಂಪನಿಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಅಮೆರಿಕದ ಕಂಪನಿಗಳಿವೆ

* ₹10.62 ಲಕ್ಷ ಕೋಟಿ - ಅಮೆರಿಕದ ಮುಂಚೂಣಿಯ ಐದು ಕಂಪನಿಗಳು 2018ರಲ್ಲಿ ದಾಖಲಿಸಿದ ವಹಿವಾಟು

* 35% -ಶಸ್ತ್ರಾಸ್ತ್ರ ತಯಾರಿಸುವ ಪ್ರಮುಖ 100 ಕಂಪನಿಗಳ ವಹಿವಾಟಿನಲ್ಲಿ ಅಮೆರಿಕದ ಐದು ಕಂಪನಿಗಳ ಪಾಲು (2018ರಲ್ಲಿ)

* ₹ 17.65 ಲಕ್ಷ ಕೋಟಿ (59%)-ಒಟ್ಟಾರೆ ಶಸ್ತ್ರಾಸ್ತ್ರ ಮಾರಾಟದಲ್ಲಿ ಅಮೆರಿಕದ ಕಂಪನಿಗಳ ಪಾಲು

*₹ 7.32 ಲಕ್ಷ ಕೋಟಿ -2018ರಲ್ಲಿ ಯುರೋಪ್‌ನ 27 ಕಂಪನಿಗಳ ಒಟ್ಟು ಶಸ್ತ್ರಾಸ್ತ್ರ ಮಾರಾಟದ ವಹಿವಾಟು

* ಅಮೆರಿಕದ ಕೆಲವು ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳು ವಿಲೀನಗೊಳ್ಳುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 2017ರಲ್ಲಿ ಶಸ್ತ್ರಾಸ್ತ್ರ ಆಧುನೀಕರಣ ಯೋಜನೆಯನ್ನು ಘೋಷಿಸಿದ್ದು, ಹೊಸ ತಲೆಮಾರಿನ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಸಲುವಾಗಿ ಇನ್ನಷ್ಟು ಸಂಸ್ಥೆಗಳು ವಿಲೀನಕ್ಕೆ ಸಿದ್ಧವಾಗುತ್ತಿವೆ. ಅಮೆರಿಕ ಸರ್ಕಾರದಿಂದ ಶಸ್ತ್ರಾಸ್ತ್ರ ಸರಬರಾಜು ಗುತ್ತಿಗೆ ಪಡೆಯುವುದು ಈ ವಿಲೀನದ ಹಿಂದಿನ ಉದ್ದೇಶ

* ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಇನ್ನೊಂದು ಪ್ರಮುಖ ರಾಷ್ಟ್ರವಾದ ರಷ್ಯಾದ ಉತ್ಪಾದನೆಯು ಸ್ಥಿರವಾಗಿದೆ. 2018ರಲ್ಲಿ ಇಲ್ಲಿಯ ಕಂಪನಿಗಳು ಶೇ 0.4ರಷ್ಟು ಮಾತ್ರ ಏರಿಕೆ ದಾಖಲಿಸಿವೆ. ಮುಂಚೂಣಿಯ 100 ಕಂಪನಿಗಳಲ್ಲಿ ರಷ್ಯಾದ ಕಂಪನಿಗಳ ಪಾಲು ಶೇ 9.7 ಮಾತ್ರ. ಶಸ್ತ್ರಾಸ್ತ್ರ ತಯಾರಿಸುವ ಟಾಪ್‌–10 ರಾಷ್ಟ್ರಗಳಲ್ಲಿ ರಷ್ಯಾದ ಒಂದು ಕಂಪನಿ ಮಾತ್ರ ಇದೆ. ಅದೂ 9ನೇ ಸ್ಥಾನದಲ್ಲಿದೆ

* 2018ರಲ್ಲಿ ಫ್ರಾನ್ಸ್‌ನ ಕಂಪನಿಗಳು ಮಾರಾಟದಲ್ಲಿ ಏರಿಕೆ ದಾಖಲಿಸಿದ್ದರೆ, ಬ್ರಿಟನ್‌ ಹಾಗೂ ಜರ್ಮನಿಯ ಕಂಪನಿ ಉತ್ಪನ್ನಗಳ ಮಾರಾಟ ಪ್ರಮಾಣ ಇಳಿಕೆಯಾಗಿದೆ

* 2018ರಲ್ಲಿ ಶಸ್ತ್ರಾಸ್ತ್ರ ತಯಾರಿಕೆಯ ಮುಂಚೂಣಿಯ 100 ಕಂಪನಿಗಳಲ್ಲಿ 80 ಕಂಪನಿಗಳು ಅಮೆರಿಕ, ರಷ್ಯಾ ಹಾಗೂ ಯುರೋಪ್‌ನವುಗಳು. ಜಪಾನ್‌ನ 6 ಕಂಪನಿಗಳು, ಇಸ್ರೇಲ್‌, ಭಾರತ ಹಾಗೂ ದಕ್ಷಿಣ ಕೊರಿಯಾದ ತಲಾ 3 ಕಂಪನಿ, ಟರ್ಕಿಯ 2 ಕಂಪನಿಗಳು, ಆಸ್ಟ್ರೇಲಿಯ, ಕೆನಡಾ ಹಾಗೂ ಸಿಂಗಪುರದ ತಲಾ ಒಂದು ಕಂಪನಿ ಪಟ್ಟಿಯಲ್ಲಿ ಸ್ಥಾನ ಪಡೆದಿವೆ

* ಜಪಾನ್‌ನ ಆರು ಕಂಪನಿಗಳು 2018ರಲ್ಲಿ ಒಟ್ಟು ₹ 7.10 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಮಾರಾಟ ಮಾಡಿವೆ. 100 ಕಂಪನಿಗಳ ಒಟ್ಟಾರೆ ಮಾರಾಟ ಪ್ರಮಾಣದಲ್ಲಿ ಜಪಾನ್‌ನ ಕಂಪನಿಗಳ ಪಾಲು ಶೇ 2.4

* ಭಾರತದ ಮೂರು ಕಂಪನಿಗಳು ಒಟ್ಟು ₹ 4.23 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಮಾರಾಟ ಮಾಡಿವೆ

––––––

ಮಿಲಿಟರಿ ವೆಚ್ಚ–ಅಗ್ರ 15 ದೇಶಗಳು (2018)

ಅಮೆರಿಕ;₹45.4 ಲಕ್ಷ ಕೋಟಿ

ಚೀನಾ;₹17.5 ಲಕ್ಷ ಕೋಟಿ

ಸೌದಿ ಅರೇಬಿಯಾ;₹4.7 ಲಕ್ಷ ಕೋಟಿ

ಭಾರತ;₹4.6 ಲಕ್ಷ ಕೋಟಿ

ಫ್ರಾನ್ಸ್;₹4.4 ಲಕ್ಷ ಕೋಟಿ

ರಷ್ಯಾ;₹4.3 ಲಕ್ಷ ಕೋಟಿ

ಬ್ರಿಟನ್;₹3.5 ಲಕ್ಷ ಕೋಟಿ

ಜರ್ಮನಿ;3.4 ಲಕ್ಷ ಕೋಟಿ

ಜಪಾನ್;₹3.2 ಲಕ್ಷ ಕೋಟಿ

ದಕ್ಷಿಣ ಕೊರಿಯಾ;₹3 ಲಕ್ಷ ಕೋಟಿ

ಇಟಲಿ;₹1.9 ಲಕ್ಷ ಕೋಟಿ

ಬ್ರೆಜಿಲ್;₹1.9 ಲಕ್ಷ ಕೋಟಿ

ಆಸ್ಟ್ರೇಲಿಯಾ;₹1.8 ಲಕ್ಷ ಕೋಟಿ

ಕೆನಡಾ;₹1.51 ಲಕ್ಷ ಕೋಟಿ

ಟರ್ಕಿ;₹1.3 ಲಕ್ಷ ಕೋಟಿ

––––––––––

* ಮಧ್ಯಪ್ರಾಚ್ಯದಲ್ಲಿ ಸೇನಾ ವೆಚ್ಚ 2018

* ಸೌದಿ ಅರೇಬಿಯಾ;₹4.7 ಲಕ್ಷ ಕೋಟಿ

* ಟರ್ಕಿ;₹1.3 ಲಕ್ಷ ಕೋಟಿ

* ಇಸ್ರೇಲ್;₹1.1 ಲಕ್ಷ ಕೋಟಿ

* ಇರಾಕ್;₹92 ಸಾವಿರ ಕೋಟಿ

* ಕುವೈತ್;₹51 ಸಾವಿರ ಕೋಟಿ

* ಒಮನ್;₹47 ಸಾವಿರ ಕೋಟಿ

* ಇರಾಕ್;₹44 ಸಾವಿರ ಕೋಟಿ

* ಈಜಿಪ್ಟ್;₹21 ಸಾವಿರ ಕೋಟಿ

* ಲೆಬನಾನ್;₹19 ಸಾವಿರ ಕೋಟಿ

* ಜೋರ್ಡಾನ್;₹14 ಸಾವಿರ ಕೋಟಿ

* ಕತಾರ್, ಯುಎಇ, ಸಿರಿಯಾ, ಯೆಮನ್ ದತ್ತಾಂಶ ಲಭ್ಯವಿಲ್ಲ

––––––––––

ಶಸ್ತ್ರಾಸ್ತ್ರ ರಫ್ತು–ಅಗ್ರ 10 ದೇಶಗಳು

ಅಮೆರಿಕ;36%

ರಷ್ಯಾ;21%

ಇತರೆ;10%

ಫ್ರಾನ್ಸ್;6.8%

ಜರ್ಮನಿ;6.4%

ಚೀನಾ;5.2%

ಬ್ರಿಟನ್;4.2%

ಸ್ಪೇನ್;3.2%

ಇಸ್ರೇಲ್;3.1%

ಇಟಲಿ;2.3%

ನೆದರ್ಲೆಂಡ್ಸ್;2.1%

–––––––

ಶಸ್ತ್ರಾಸ್ತ್ರ ಆಮದು–ಅಗ್ರ 10 ದೇಶಗಳು

ಸೌದಿ ಅರೇಬಿಯಾ;12%

ಭಾರತ;9.5%

ಈಜಿಪ್ಟ್;5.1%

ಆಸ್ಟ್ರೇಲಿಯಾ;4.6%

ಅಲ್ಜೀರಿಯಾ;4.4%

ಚೀನಾ;4.2%

ಯುಎಇ;3.7%

ಇರಾಕ್;3.7%

ದಕ್ಷಿಣ ಕೊರಿಯಾ;3.1%

ವಿಯೆಟ್ನಾಂ; 2.9%

ಇತರೆ;47%

–––––––––

ಆಧಾರ: ಸಿಪ್ರಿ (ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಮಿಲಿಟರಿ ಎಕ್ಸ್‌ಪೆಂಡಿಚರ್ ಡೇಟಾಬೇಸ್ 2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT