ಶನಿವಾರ, ಏಪ್ರಿಲ್ 4, 2020
19 °C

ಕೊರೊನಾಗೆ ಕಡಿವಾಣ: ಮೋದಿ ಕಿವಿಮಾತು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಏನೆಲ್ಲಾ ಮಾಡಬಹುದು ಎಂಬುದನ್ನು ಪ್ರಸ್ತಾಪಿಸಿದರು.

* ಭಾರತೀಯರೆಲ್ಲರೂ ಜಾಗೃತರಾಗಿರಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಲೇಬಾರದು

* ನಿತ್ಯದ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಿ. ಶಸ್ತ್ರಚಿಕಿತ್ಸೆ ಮುಂದೂಡಬಹುದಾಗಿದ್ದರೆ ಹಾಗೆಯೇ ಮಾಡಿ

* 60 ವರ್ಷ ದಾಟಿದ ಯಾರೂ ಮನೆಯಿಂದ ಹೊರಗೆ ಬರಬಾರದು

* ಮನೆಗಳಲ್ಲಿ ಕೆಲಸ ಮಾಡುವವರು, ಚಾಲಕರು, ಬೆಂಬಲ ಸಿಬ್ಬಂದಿ, ತೋಟದ ಮಾಲಿ ಮುಂತಾದವರ ಸಂಬಳ ಕಡಿತ ಮಾಡಬೇಡಿ

* ಬೇಕಾದಷ್ಟು ಆಹಾರ ಮತ್ತು ಅಗತ್ಯ ವಸ್ತುಗಳ ಸಂಗ್ರಹ ಇದೆ. ಹಾಗಾಗಿ, ಭಯಬಿದ್ದು ಖರೀದಿ ಮಾಡಲು ಹೋಗಬೇಡಿ. ವದಂತಿಗಳಿಗೆ ಕಿವಿಗೊಡಬೇಡಿ

* ಕೊರೊನಾದಿಂದ ಉಂಟಾಗಿರುವ ಆರ್ಥಿಕ ಹಿನ್ನಡೆ ಸರಿಪಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗುವುದು

ಇತರ ಬೆಳವಣಿಗೆಗಳು

* ಕೊರೊನಾದಿಂದ ಆಗಿರುವ ಬಿಕ್ಕಟ್ಟು ಪರಿಹಾರಕ್ಕೆ ₹20 ಸಾವಿರ ಕೋಟಿಯ ವಿಶೇಷ ಪ್ಯಾಕೇಜನ್ನು ಕೇರಳ ಸರ್ಕಾರ ಘೋಷಿಸಿದೆ

* ಖಾಸಗಿ ಕ್ಷೇತ್ರದಲ್ಲಿ ಅತ್ಯಗತ್ಯ ಮತ್ತು ತುರ್ತು ಸೇವೆಗಳಲ್ಲಿ ಕೆಲಸ ಮಾಡುವವರನ್ನು ಬಿಟ್ಟು ಉಳಿದವರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ

* 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಹೆಚ್ಚಿನವರು ಮನೆಯಲ್ಲಿಯೇ ಉಳಿಯುವಂತೆ ನಿರ್ದೇಶನ ನೀಡಲು ರಾಜ್ಯಗಳಿಗೆ ಸಲಹೆ

* ಟಿಕೆಟ್‌ ದರದಲ್ಲಿ ಇದ್ದ ಎಲ್ಲ ರಿಯಾಯಿತಿಗಳನ್ನು ಭಾರತೀಯ ರೈಲ್ವೆಯು ರದ್ದುಪಡಿಸಿದೆ. ರೋಗಿಗಳು, ವಿದ್ಯಾರ್ಥಿಗಳು ಮತ್ತು ಅಂಗವಿಕಲರಿಗೆ ವಿನಾಯಿತಿ ನೀಡಲಾಗಿದೆ. ಇದು ಶುಕ್ರವಾರ ಮಧ್ಯರಾತ್ರಿಯಿಂದ ಜಾರಿ

* ಮುಂಬೈನ ಪ್ರಸಿದ್ಧ ಡಬ್ಬಾವಾಲಾಗಳ ಸೇವೆಯನ್ನು ಶುಕ್ರವಾರದಿಂದ ಇದೇ 31ರವರೆಗೆ ಅಮಾನತು ಮಾಡಲಾಗಿದೆ. ದೆಹಲಿಯ ಸುಂದರ್‌ನಗರ ಮಾರುಕಟ್ಟೆಯನ್ನು ಇದೇ 31ರವರೆಗೆ ಮುಚ್ಚಲು ನಿರ್ಧರಿಸಲಾಗಿದೆ

* 84 ರೈಲುಗಳನ್ನು ಶುಕ್ರವಾರದಿಂದ ಇದೇ 31ರವರೆಗೆ ರದ್ದು ಮಾಡಲಾಗಿದೆ. ರದ್ದಾದ ರೈಲುಗಳ ಸಂಖ್ಯೆ 155ಕ್ಕೆ ಏರಿದೆ. ಈ ರೈಲುಗಳಲ್ಲಿ ಟಿಕೆಟ್‌ ಕಾಯ್ದಿರಿಸಿದವರಿಗೆ ಟಿಕೆಟ್‌ ರದ್ದು ಶುಲ್ಕ ಇಲ್ಲ, ಪೂರ್ಣ ಮೊತ್ತ ವಾಪಸ್‌ ಸಿಗಲಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು