ಕೊಚ್ಚಿ: ಮಾಲ್ಡೀವ್ಸ್‌ನಲ್ಲಿದ್ದ 698 ಭಾರತೀಯರನ್ನು ಹೊತ್ತ ನೌಕಾಪಡೆಯ ಐಎನ್‌ಎಸ್ ಜಲಾಶ್ವ ಭಾನುವಾರ ಬೆಳಗ್ಗೆ 9.30ಕ್ಕೆ ಕೊಚ್ಚಿಯ ಬಂದರಿಗೆ ಬಂದಿಳಿದಿದೆ. ಈ ಮೂಲಕ ಲಾಕ್‌ಡೌನ್ ವೇಳೆ ವಿದೇಶದಲ್ಲಿದ್ದ ಭಾರತೀಯರನ್ನು ವಾಪಸ್ ಕರೆತರುವ ನೌಕಾಪಡೆಯ ಮೊದಲ ಬೃಹತ್ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಮಾಲೆಯಲ್ಲಿ ಶುಕ್ರವಾರ ರಾತ್ರಿ ನೌಕೆ ಪ್ರಯಾಣ ಆರಂಭಿಸಿತ್ತು. ನೌಕೆಯಲ್ಲಿದ್ದವರಲ್ಲಿ ಕರ್ನಾಟಕದ 8 ಮಂದಿ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದವರು ಇದ್ದಾರೆ. ಬಹುತೇಕರು ಕೇರಳ, ತಮಿಳುನಾಡಿನವರಾಗಿದ್ದಾರೆ.

‘ಪ್ರಯಾಣಿಕರಿಗೆ ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯಸೇತು ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.ಬಂದರು ಟರ್ಮಿನಲ್‌ನಲ್ಲಿ ಉಚಿತ ವೈ-ಫೈ ವ್ಯವಸ್ಥೆ ಮಾಡಲಾಗಿದೆ. ಲಗೇಜ್‌ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಯಾಣಿಕರನ್ನು ಕ್ವಾರಂಟೈನ್ ಕೇಂದ್ರಗಳು ಅಥವಾ ಆಸ್ಪತ್ರೆಗಳಿಗೆ ಕಳುಹಿಸಲು ಕೇರಳ ಸರ್ಕಾರ ಆಂಬುಲೆನ್ಸ್, ಬಸ್ ಹಾಗೂ ಟ್ಯಾಕ್ಸಿ ವ್ಯವಸ್ಥೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.