ಸೋಮವಾರ, ಮಾರ್ಚ್ 30, 2020
19 °C

ಶಾಹೀನ್‌ ಬಾಗ್‌: ಪ್ರತಿಭಟನಕಾರರಿಗೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಗೃಹಸಚಿವ ಅಮಿತ್ ಶಾ ಅವರ ನಿವಾಸದವರೆಗೆ ಮೆರವಣಿಗೆ ನಡೆಸಲು ಶಾಹೀನ್‌ ಬಾಗ್ ಪ್ರತಿಭಟನಕಾರರಿಗೆ ಭಾನುವಾರ ಪೊಲೀಸರು ಅಡ್ಡಿಪಡಿಸಿದರು.

ಮೆರವಣಿಗೆ ನಡೆಸಲು ಶಾಹೀನ್‌ ಬಾಗ್‌ನಲ್ಲಿ ನೂರಾರು ಮಹಿಳೆಯರು ನೆರೆದಿದ್ದರು. ಆದರೆ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ, ಬ್ಯಾರಿಕೇಡ್‌ಗಳನ್ನು ಇರಿಸಿ ಮಹಿಳೆಯರನ್ನು ತಡೆದರು.

ಈ ವೇಳೆ ಹಿರಿಯ ಮಹಿಳೆಯರನ್ನೊಳಗೊಂಡ ನಿಯೋಗದ ಮೂಲಕ ಪೊಲೀಸರೊಂದಿಗೆ ಸಂಧಾನಕ್ಕೆ ಮುಂದಾದ ರ್‍ಯಾಲಿ ಆಯೋಜಕರು, ‘ಶಾಂತಿಯುತವಾಗಿ ರ್‍ಯಾಲಿ ಮೂಲಕ ಶಾ ನಿವಾಸ ತಲುಪಿ ಚರ್ಚೆ ನಡೆಸುತ್ತೇವೆ. ಇದಕ್ಕೆ ಅನುಮತಿ ನೀಡಬೇಕು’ ಎಂದು ಕೋರಿದರು. ಆದರೆ ಅನುಮತಿ ದೊರಕದ ಕಾರಣ ಪ್ರತಿಭಟನಕಾರರು ಮತ್ತೆ ಧರಣಿ ಸ್ಥಳಕ್ಕೆ ಮರಳಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತು ಚರ್ಚೆ ನಡೆಸಲು ಬಯಸುವವರು ನನ್ನ ಕಚೇರಿ ಸಂಪರ್ಕಿಸುವ ಮೂಲಕ ನನ್ನನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಳ್ಳಬಹುದು’ ಎಂದು ಶಾ ಹೇಳಿದ್ದರು. ಈ ಸಲುವಾಗಿ ಮೆರವಣಿಗೆ ಮೂಲಕ ಅವರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಲು ಪ್ರತಿಭಟನಕಾರರು ಮುಂದಾಗಿದ್ದರು.

‘ಅಭಿಪ್ರಾಯ ಹೇರುವ ಯತ್ನ’
ಪಣಜಿ (ಪಿಟಿಐ):
ಸಿಎಎ ವಿರೋಧಿಸಿ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಟೀಕಿಸಿರುವ ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್‌ ಅವರು, ‘ಇದು ಬೇರೆಯವರ ಮೇಲೆ ಅಭಿಪ್ರಾಯಗಳನ್ನು ಹೇರುವ ಯತ್ನವಾಗಿದೆ’ ಎಂದಿದ್ದಾರೆ.

‘ಪ್ರತಿಭಟನಕಾರರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಜನಸಾಮಾನ್ಯರ ಜೀವನ ಅಸ್ತವ್ಯಸ್ತಗೊಳಿಸಲು ಹಕ್ಕಿಲ್ಲ’ ಎಂದು ಹೇಳಿದ್ದಾರೆ.

ದಕ್ಷಿಣ ದೆಹಲಿ ಹಾಗೂ ನೋಯ್ಡಾ ಮಧ್ಯೆ ಸಂಪರ್ಕ ಕಲ್ಪಿಸುವ ಶಾಹೀನ್‌ ಬಾಗ್‌ನಲ್ಲಿ ಕಳೆದ ಎರಡು ತಿಂಗಳಿಂದ ಧರಣಿ ನಡೆಯುತ್ತಿರುವುದರಿಂದ ಇಲ್ಲಿ ವಾಹನ ಸಂಚಾರ ರದ್ದುಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು