ಶುಕ್ರವಾರ, ಫೆಬ್ರವರಿ 26, 2021
31 °C

ದೆಹಲಿಯಲ್ಲಿ ಪತ್ರಕರ್ತೆಯ ಕಾರಿಗೆ ಮೊಟ್ಟೆ ಎಸೆದು ಗುಂಡು ಹಾರಿಸಿದ ದುಷ್ಕರ್ಮಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಶನಿವಾರ ತಡರಾತ್ರಿ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೆಹಲಿ ಪತ್ರಕರ್ತೆ ಮಿಥಾಲಿ ಚಂದೋಲಾ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಮೊದಲು ಕಾರಿನ ಮೇಲೆ ಮೊಟ್ಟೆ ಎಸೆದು ಆಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮಿಥಾಲಿ, ಪೂರ್ವ ದೆಹಲಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಿಥಾಲಿ ಅವರ ಕಾರು ಧರ್ಮಶಿಲ್ಲಾ ಕ್ಯಾನ್ಸರ್ ಆಸ್ಪತ್ರೆಯ ಬಳಿ ತಲುಪಿದಾಗ  ಕಾರಿನ ಮುಂದೆ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ.  ಅವರು ಹಾರಿಸಿದ ಮೂರು ಗುಂಡುಗಳಲ್ಲಿ ಎರಡು ಗುಂಡು ಕಾರಿನ ಮುಂಭಾಗಕ್ಕೆ ತಾಗಿದೆ, ಇನ್ನೊಂದು ಗುಂಡು ಆಕೆಯ ಬಲ ತೋಳಿಗೆ ತಾಗಿದೆ. ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿದೆ. ಗಾಯಗೊಂಡ ಮಿಥಾಲಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಪೂರ್ವ ವಲಯ) ಅಲೋಕ್ ಕುಮಾರ್ ಹೇಳಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಯ ವರದಿ ಪ್ರಕಾರ ಮಿಥಾಲಿ ಅವರು ನೋಯ್ಡಾದಲ್ಲಿರುವ ಸುದ್ದಿವಾಹಿನಿಯೊಂದರಲ್ಲಿ ಪತ್ರಕರ್ತೆಯಾಗಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಹತ್ಯೆಗೆ ಯತ್ನ ಆರೋಪ ಹೊರಿಸಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಿಥಾಲಿಗೆ ಅವರ ಗಂಡನೊಂದಿಗೆ ವೈಮನಸ್ಸು ಇದೆ ಎಂದು ಅವರೇ ಹೇಳಿದ್ದರು. ಹಾಗಾಗಿ ವೈಯಕ್ತಿಕ ದ್ವೇಷ ಈ ದಾಳಿಗೆ ಕಾರಣ ಎಂದ ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು