ಸಿಕ್ಕಿಂ ವಿಧಾನಸಭೆ: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾಗೆ ಸರಳ ಬಹುಮತ

ಭಾನುವಾರ, ಜೂನ್ 16, 2019
28 °C

ಸಿಕ್ಕಿಂ ವಿಧಾನಸಭೆ: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾಗೆ ಸರಳ ಬಹುಮತ

Published:
Updated:

ಗ್ಯಾಂಗ್ಟಕ್: ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ (ಎಸ್‌ಡಿಎಫ್‌)  ಸೋಲು ಕಂಡಿದ್ದು  ವಿರೋಧ ಪಕ್ಷವಾಗಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಸರಳ ಬಹುಮತ ಪಡೆದಿದೆ. 

ಆಡಳಿತಾರೂಢ ಎಸ್‌ಡಿಎಫ್‌ ಮತ್ತು ಎಸ್‌ಕೆಎಂ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಅಂತಿಮವಾಗಿ ಮತದಾರ ಪ್ರಭುಗಳು ಎಸ್‌ಕೆಎಂ ಪಕ್ಷವನ್ನು ಕೈಹಿಡಿದಿದ್ದಾರೆ. 

32 ವಿಧಾನಸಭಾ ಕ್ಷೇತ್ರಗಳಿರುವ ಸಿಕ್ಕಿಂ ರಾಜ್ಯದಲ್ಲಿ ಅಧಿಕಾರಕ್ಕೇರಲು ಸರಳ ಬಹುಮತ 17 ಸ್ಥಾನ ಗಳಿಸಬೇಕು. ಮತ ಎಣಿಕೆ ಆರಂಭದಲ್ಲಿ ಸಮಬಲದ ಸ್ಥಾನಗಳನ್ನು ಎರಡೂ ಪಕ್ಷಗಳು ಪಡೆದಿದ್ದವು. ಆದರೆ ಸಂಜೆ ವೇಳೆಗೆ ಸಿಕ್ಕಿಂನ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿ ಎಸ್‌ಕೆಎಂ ಮುನ್ನಡೆ ಸಾಧಿಸಿತು. ಈ ಮೂಲಕ ಎಸ್‌ಡಿಎಫ್‌ನ ಪವನ್‌ ಕುಮಾರ್ ಚಾಮ್ಲಿಂಗ್‌ ಅವರ ಆರನೇ ಬಾರಿ ಮುಖ್ಯಮಂತ್ರಿ ಆಗುವ ಕನಸನ್ನುನುಚ್ಚು ನೂರಾಯಿತು. 

ಎಸ್‌ಡಿಎಫ್‌ 15, ಎಸ್‌ಕೆಎಂ 17  ಸ್ಥಾನಗಳನ್ನು ಪಡೆದಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಶೂನ್ಯ ಸಂಪಾದನೆ ಮಾಡಿವೆ. ಚುನಾವಣಾ ಆಯೋಗದ ಲೆಕ್ಕಾಚಾರದಂತೆ ಎಸ್‌ಡಿಎಫ್‌ಶೇ 46.8ರಷ್ಟು ಮತ ಗಳಿಸಿದ್ದರೆ, ಎಸ್‌ಕೆಎಂ ಶೆ 47.4ರಷ್ಟು ಮತ ಗಳಿಸಿದೆ.

ಭಾರತದ ಮೊದಲ ಸಂಪೂರ್ಣ ನಿರ್ಮಲ ರಾಜ್ಯ ಎಂಬ ಶ್ರೇಯ ಸಿಕ್ಕಿಂನದು. 1975ರಲ್ಲಿ ಭಾರತ ಒಕ್ಕೂಟಕ್ಕೆ ಸೇರಿದ ಸಿಕ್ಕಿಂನಲ್ಲಿ ‍ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ. ಇಲ್ಲಿಯವರೆಗೂ ಅಲ್ಲಿ ರಾಷ್ಟ್ರೀಯ ಪಕ್ಷಗಳು ನೆಲೆಯೂರಲು ಸಾಧ್ಯವಾಗಿಲ್ಲ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !