ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ.70 ಬೆಲೆ ಹೆಚ್ಚಿಸಿದ್ರೂ ಸರಿಯೇ, ಇದು ದೇಶಕ್ಕೆ ನಮ್ಮ ಕೊಡುಗೆ: ಮದ್ಯಪ್ರಿಯರು

Last Updated 5 ಮೇ 2020, 9:06 IST
ಅಕ್ಷರ ಗಾತ್ರ

ನವದೆಹಲಿ: 'ಮದ್ಯದ ಮೇಲಿನ ತೆರಿಗೆಯನ್ನು ಶೇ.70ರಷ್ಟು ಹೆಚ್ಚಿಸಿದರೂ ಸರಿಯೇ ನಾವು ಕೊಳ್ಳುತ್ತೇವೆ. ಅದನ್ನು ದೇಶಕ್ಕೆ ನೀಡಿದ ಕೊಡುಗೆ ಎಂದು ನಾವು ಭಾವಿಸುತ್ತೇವೆ,' ಎಂದು ದೆಹಲಿಯ ಮದಿರೆಪ್ರಿಯರೊಬ್ಬರು ಹೇಳಿದರೆ, 'ಮದ್ಯಪ್ರಿಯರೇ ಈ ದೇಶದ ಆರ್ಥ ವ್ಯವಸ್ಥೆ,' ಎಂದು ಹೇಳಿದ ಮತ್ತೊಬ್ಬ ವ್ಯಕ್ತಿ ಸಾಲುಗಟ್ಟಿ ನಿಂತಿದ್ದವರ ಮೇಲೆ ಹೂ ಚೆಲ್ಲಿದರು.

ಮದ್ಯದ ಮೇಲೆ ದೆಹಲಿ ಸರ್ಕಾರವು ಶೇ. 70ರಷ್ಟು ಕೊರೊನಾ ವೈರಸ್‌ ಶುಲ್ಕ ವಿಧಿಸಿದೆ. ಇಷ್ಟಾದರೂ, ದೆಹಲಿಯ ಮದ್ಯದಂಗಡಿಗಳ ಎದುರು ಸಾಲು ಮಾತ್ರ ಕಡಿಮೆಯಾಗಿಲ್ಲ. 9 ಗಂಟೆಗೆ ಆರಂಭವಾಗುವ ಅಂಗಡಿಗಳ ಎದುರು ಬೆಳಗ್ಗೆ 6 ಗಂಟೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದಾರೆ.

ಈ ಕುರಿತು ಮಾತನಾಡಿರುವ ದೆಹಲಿಯ ಲಕ್ಷ್ಮಿ ನಗರದ ಅಂಗಡಿ ಎದುರಿನ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ, 'ಶೇ. 70ರಷ್ಟು ಬೆಲೆ ಹೆಚ್ಚಿಸಿದರೂ ಸರಿಯೇ ನಾವು ಮದ್ಯ ಖರೀದಿಸುತ್ತೇವೆ. ಅದನ್ನು ದೇಶಕ್ಕೆ ನೀಡಿದ ಕೊಡುಗೆ ಎಂದುಕೊಳ್ಳುತ್ತೇವೆ. ಆದರೆ, ಇಲ್ಲಿ ಭದ್ರತೆಯೇ ಇಲ್ಲ. ಬೆಳಗ್ಗೆ 9 ಗಂಟೆಗೆ ತೆರಯುವ ಮದ್ಯದಂಗಡಿಗಳ ಎದುರು ಬೆಳಗ್ಗೆ 6 ರಿಂದಲೇ ಜನ ಸಾಲುಗಟ್ಟಿ ನಿಂತಿದ್ದಾರೆ. ಆದರೆ, ಪೊಲೀಸರು ಬೆಳಗ್ಗೆ 8.55ಕ್ಕೆ ಸ್ಥಳಕ್ಕೆ ಬಂದಿದ್ದಾರೆ. ಇಲ್ಲಿ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ,' ಎಂದು ಪ್ರಶ್ನೆ ಮಾಡಿದ್ದಾರೆ.

ದೆಹಲಿಯ ಚಂದರ್‌ನಗರದ ಮದ್ಯದಂಗಡಿಯ ಎದುರು ಸಾಲುಗಟ್ಟಿ ನಿಂತಿದ್ದವರ ಮೇಲೆ ವ್ಯಕ್ತಿಯೊಬ್ಬರು ಹೂ ಚೆಲ್ಲಿದರು. ನಂತರ ಮಾತನಾಡಿದ ಅವರು, 'ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ನೀವೇ ರಾಷ್ಟ್ರದ ಅರ್ಥ ವ್ಯವಸ್ಥೆ,' ಎಂದು ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT