ವಲ್ಸಾದ್:ಪ್ರೇಮಿಗಳ ದಿನದಂದೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಆಶ್ಚರ್ಯವೊಂದು ಕಾದಿತ್ತು. ಕಾರ್ಯಕ್ರಮ ವೇದಿಕೆ ಮೇಲೆಮಹಿಳೆಯೊಬ್ಬರು ರಾಹುಲ್‌ಗೆ ಮುತ್ತಿಕ್ಕಿದ್ದಾರೆ. ಈ ಕ್ಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತ್‌ನ ವಲ್ಸಾದ್‌ನಲ್ಲಿ ಗುರುವಾರ ಆಯೋಜಿಸಿದ್ದ ರ‍್ಯಾಲಿ ವೇಳೆ ಕಾರ್ಯಕ್ರಮವೇದಿಕೆ ಮೇಲೆ ಹಾರ ಹಿಡಿದು ಬಂದ ಅಭಿಮಾನಿ ಮಹಿಳೆಯರ ಗುಂಪಿನಲ್ಲಿದ್ದ ಒಬ್ಬ ಮಹಿಳೆ ರಾಹುಲ್ ಕೆನ್ನೆಗೆ ಮುತ್ತಿಕ್ಕಿದರು. ಬಳಿಕ ಗುಂಪು ರಾಹುಲ್‌ಗೆ ಹೂ ಮಾಲೆ ಹಾಕಿ ಅಭಿನಂದಿಸಿತು.

ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್, ‘ಅವರು(ನರೇಂದ್ರ ಮೋದಿ)ನನಗೆ ಮತ್ತು ನಮ್ಮ ಕುಟುಂಬ ಹಾಗೂ ಕಾಂಗ್ರೆಸ್‌ಅನ್ನು ಅವಮಾನಿಸುತ್ತಾರೆ ಎಂಬ ಸತ್ಯದ ಹೊರತಾಗಿಯೂ ಸಂಸತ್‌ನಲ್ಲಿ ಅವರನ್ನು ಆಲಂಗಿಸಿದೆ’ ಎಂದು ಹೇಳಿದ್ದಾರೆ.

ದ್ವೇಷವನ್ನು ಪ್ರೀತಿಯಿಂದ ಮಾತ್ರ ಸೋಲಿಸಬಹುದು. ಅವರು ದ್ವೇಷವನ್ನು ಹೊಂದಿದ್ದಾರೆ ಮತ್ತು ನಾನು ಪ್ರೀತಿಯಿಂದ ದ್ವೇಷವನ್ನು ಎದುರಿಸಿದೆ ಎಂದು ರಾಹುಲ್ ಹೇಳಿದ್ದಾರೆ.

ನಾವು ಮಾತು ನೀಡಿದಂತೆ ಪಕ್ಷ ಅಧಿಕಾರಕ್ಕೆ ಬಂದ 10 ದಿನಳ ಒಳಗಾಗಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಕೊಟ್ಟ ಮಾತಿಗೂ ಮುನ್ನವೇ ಈ ಕಾರ್ಯ ಮಾಡಿದ ಮುಖ್ಯಮಂತ್ರಿಗಳಿಗೆ ನಾನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.