ಬೆಂಗಳೂರು ದಕ್ಷಿಣ - ಕ್ಷೇತ್ರ ದರ್ಶನ

ಶನಿವಾರ, ಮಾರ್ಚ್ 23, 2019
34 °C

ಬೆಂಗಳೂರು ದಕ್ಷಿಣ - ಕ್ಷೇತ್ರ ದರ್ಶನ

Published:
Updated:
Prajavani

ಬೆಂಗಳೂರು: 1996ರಿಂದಲೂ ಕಮಲ ಪಡೆಯ ತೆಕ್ಕೆಯಲ್ಲಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ‘ಅನುಕಂಪದ ಅಲೆ’ಯ ನಿರೀಕ್ಷೆಯಲ್ಲಿದ್ದರೆ, ‘ಕೈ’ ‍ಪಾಳಯಕ್ಕೆ ಅಭ್ಯರ್ಥಿಗಳ ಹುಡುಕಾಟವೇ ತಲೆನೋವಿನ ಕೆಲಸವಾಗಿದೆ.

ಕೇಂದ್ರ ಸಚಿವರಾಗಿದ್ದ ಎಚ್‌.ಎನ್‌. ಅನಂತಕುಮಾರ್ ಅವರು ಆರು ಸಲ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಪ್ರತಿ ಚುನಾವಣೆಯಲ್ಲಿ ಹೊಸ ಹೊಸ ‘ಪ್ರಯೋಗ’ ಮಾಡಿದರೂ ಕಾಂಗ್ರೆಸ್‌ಗೆ ಯಶಸ್ಸು ಸಿಕ್ಕಿಲ್ಲ. ಅನಂತಕುಮಾರ್‌ ನವೆಂಬರ್‌ನಲ್ಲಿ ನಿಧನರಾದರು. ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ. ತೇಜಸ್ವಿನಿ ಸ್ಪರ್ಧೆಗೆ ಇಬ್ಬರು ಶಾಸಕರ ವಿರೋಧ ಇದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೆ ‘ಕೈ’ ಅಭ್ಯರ್ಥಿ ಕಣಕ್ಕೆ ಇಳಿಯುವುದು ನಿಶ್ಚಿತ.

ಆಕಾಂಕ್ಷಿಗಳು

ಬಿಜೆಪಿ–‍ತೇಜಸ್ವಿನಿ ಅನಂತಕುಮಾರ್‌, ನಂದನ್‌ ನಿಲೇಕಣಿ, ಟಿ.ವಿ.ಮೋಹನದಾಸ ಪೈ, ಎಲ್‌.ಎ. ರವಿಸುಬ್ರಹ್ಮಣ್ಯ

ಕಾಂಗ್ರೆಸ್‌; ರಾಮಲಿಂಗಾ ರೆಡ್ಡಿ, ಪ್ರಿಯಾಕೃಷ್ಣ, ಕೃಷ್ಣ ಬೈರೇಗೌಡ

ಮತದಾರರ ಸಂಖ್ಯೆ ;11,13,726

ವಿಧಾನಸಭಾ ಕ್ಷೇತ್ರವಾರು ಬಲಾಬಲ
ಒಟ್ಟು–8
ಕಾಂಗ್ರೆಸ್‌ 3– ಬಿಟಿಎಂ ಬಡಾವಣೆ, ಜಯನಗರ, ವಿಜಯನಗರ
ಬಿಜೆಪಿ 5–ಗೋವಿಂದರಾಜನಗರ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಬೊಮ್ಮನಹಳ್ಳಿ

 

ಹಿಂದಿನ ಚುನಾವಣೆಗಳ ಲೆಕ್ಕಾಚಾರ

2009

ವಿಜೇತರು: ಅನಂತಕುಮಾರ್‌, ಗೆಲುವಿನ ಅಂತರ: 37,612

ಅನಂತಕುಮಾರ್‌; ಬಿಜೆಪಿ;48.20%

ಕೃಷ್ಣ ಬೈರೇಗೌಡ;ಕಾಂಗ್ರೆಸ್‌; 44.06%

ಪ್ರೊ.ಕೆ.ಇ.ರಾಧಾಕೃಷ್ಣ; ಜೆಡಿಎಸ್‌; 3.31%

ಇತರೆ; 4.43%

 

2014

ವಿಜೇತರು: ಅನಂತಕುಮಾರ್‌, ಗೆಲುವಿನ ಅಂತರ: 2,28,575

ಅನಂತಕುಮಾರ್‌; ಬಿಜೆಪಿ; 56.88%

ನಂದನ್‌ ನಿಲೇಕಣಿ; ಕಾಂಗ್ರೆಸ್‌; 36.37%

ರುತ್ ಮನೋರಮಾ; ಜೆಡಿಎಸ್‌; 2.30%

ಇತರೆ: 4.45%

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !