ಗುರುವಾರ , ಜೂಲೈ 9, 2020
21 °C

ಕೋವಿಡ್-19: ಬೀದರ್‌ನಲ್ಲಿ ಶುಕ್ರವಾರ ರಾತ್ರಿ ವೃದ್ಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೀದರ್: ಕೋವಿಡ್‌ 19 ಸೋಂಕಿನಿಂದಾಗಿ ಶುಕ್ರವಾರ ರಾತ್ರಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ದಾಖಲೆ ಪ್ರಕಾರ ಇದು ಕೋವಿಡ್‌ 19 ಸೋಂಕಿಗೆ ಮೊದಲ ಸಾವಾಗಿದೆ. 

ಓಲ್ಡ್‌ಸಿಟಿಯ ನಿವಾಸಿಯಾಗಿದ್ದ ವೃದ್ಧ ಎರಡು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಗಾಗ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಇವರ ಮನೆಯಲ್ಲಿ ಯೊರೊಬ್ಬರಿಗೂ ಸೋಂಕು ತಗುಲಿರಲಿಲ್ಲ. ಆದರೆ, ತೀವ್ರ ಉಸಿರಾಟ ತೊಂದರೆಯಿಂದ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮಾಹಿತಿ ದೊರೆತ ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂದಿ ರೋಗಿಯ ಗಂಟಲು ದ್ರವ ಹಾಗೂ ರಕ್ತ ಮಾದರಿ ಪಡೆದು ಕಲಬುರ್ಗಿಯ ಪ್ರಯೋಗಾಯಲಕ್ಕೆ ಕಳಿಸಿದ್ದರು. ತಕ್ಷಣ ವೈಜ್ಞಾನಿಕ ವಿಧಾನದಲ್ಲಿ ಶವಸಂಸ್ಕಾರ ನೆರವೇರಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರನ್ನೂ ಕ್ವಾರಂಟೈನ್‌ಲ್ಲಿ ಇಡಲಾಗಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.