ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ತಾತ್ಕಾಲಿಕ ಕೀ ಉತ್ತರ ಪ್ರಕಟ

Last Updated 1 ಮೇ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಕೋರ್ಸ್‌ಗಳ ಪ್ರವೇಶಕ್ಕಾಗಿ ಇದೇ 29 ಮತ್ತು 30 ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಪ್ರಶ್ನೆ ಪತ್ರಿಕೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಸಿಇಟಿ ವೆಬ್‌ ಸೈಟ್‌ನಲ್ಲಿ ಬುಧವಾರ ಪ್ರಕಟಿಸಲಾಗಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ತಾತ್ಕಾಲಿಕ ‘ಕೀ ಉತ್ತರ’ಗಳಾಗಿರುತ್ತವೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳ ಕೀ ಉತ್ತರಗಳುkea.kar.nic.in ನಲ್ಲಿ ಪ್ರಕಟವಾಗಲಿದೆ. ಇದರಿಂದ ಎಷ್ಟು ಅಂಕಗಳು ಸಿಗಬಹುದು ಎಂಬ ಅಂದಾಜು ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಪರೀಕ್ಷೆ ಬುಧವಾರ ನಡೆಯಿತು. 40 ಅಂಕಗಳ ಪರೀಕ್ಷೆಯನ್ನು 12 ಅಂಕಗಳನ್ನು ಪಡೆದರೆ ಅರ್ಹತೆ ಪಡೆಯುತ್ತಾರೆ. ಇದರ ಆಧಾರದ ಮೇಲೆಯೇ ಈ ವಿದ್ಯಾರ್ಥಿಗಳು ರ್‍ಯಾಂಕಿಂಗ್ ಪಡೆಯುತ್ತಾರೆ.

ಕೀ ಉತ್ತರ ನೋಡಲು ಏನು ಮಾಡಬೇಕು:

*ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌kea.kar.nic.in ನಲ್ಲಿ ವಿಷಯವಾರು ಕೀ ಉತ್ತರಗಳ ಲಿಂಕ್‌ ಇರುತ್ತದೆ. ಅದನ್ನು ಕ್ಲಿಕ್‌ ಮಾಡಿದರೆ ಉತ್ತರ ಪಡೆಯಬಹುದು.

*ಕೀ ಉತ್ತರಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಸರಿ ಇದೇ ಎಂಬುದನ್ನು ಅಭ್ಯರ್ಥಿಗಳು ತಾಳೆ ಹಾಕಿ ಮೌಲ್ಯಮಾಪನ ನಡೆಸಬಹುದು.

ತಾತ್ಕಲಿಕ ಕೀ ಉತ್ತರದಲ್ಲಿ ಯಾವುದೇ ಆಕ್ಷೇಪಗಳು ಇದ್ದರೆ, ಮೇ 4 ರ ಸಂಜೆ 5.30 ರಿಂದ ಮೇ 8 ಸಂಜೆ 5.30ರೊಳಗೆ ಆನ್‌ಲೈನ್‌ ಪೋರ್ಟಲ್‌ ಮೂಲಕವೇ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT