ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ: ರಕ್ಷಣೆಗೆ ಕಾರವಾರದ ಯುವಕನ ಮೊರೆ

ಹಾಂಕಾಂಗ್‌ನಿಂದ ಟೋಕಿಯೋಕ್ಕೆ ಹೊರಟಿದ್ದ ಕ್ರೂಸ್‌ಗೆ ಸಮುದ್ರದಲ್ಲೇ ಜಪಾನ್ ತಡೆ
Last Updated 8 ಫೆಬ್ರುವರಿ 2020, 16:28 IST
ಅಕ್ಷರ ಗಾತ್ರ

ಕಾರವಾರ:ಕೊರೊನಾ ವೈರಾಣು ಪೀಡಿತರು ಇರುವ ಆತಂಕದಿಂದ ಜಪಾನ್, ಎರಡು ದಿನಗಳ ಹಿಂದೆ ಕ್ರೂಸ್ (ಪ್ರಯಾಣಿಕರ ದೊಡ್ಡ ಹಡಗು) ಒಂದನ್ನು ತನ್ನ ದಡಕ್ಕೆ ಪ್ರವೇಶಿಸದಂತೆ ತಡೆದಿದೆ. ಕಾರವಾರದ ಯುವಕರೊಬ್ಬರು ಅದರಲ್ಲಿ ಸಿಬ್ಬಂದಿಯಾಗಿದ್ದು, ಅವರ ಕುಟುಂಬದಲ್ಲಿ ಆತಂಕ ಮೂಡಿದೆ.

ನಗರದ ನಂದನಗದ್ದಾದ ಕೆನರಾ ಬ್ಯಾಂಕ್ ಕಾಲೊನಿ ನಿವಾಸಿ ಅಭಿಷೇಕ ಮಗರ್ (26) ಹಡಗಿನಲ್ಲಿರುವರು. ಅವರುಬರ್ಮುಡಾ ಮೂಲದ ‘ಡೈಮಂಡ್ ಪ್ರಿನ್ಸೆಸ್’ ಹೆಸರಿನ ಕ್ರೂಸ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಹಡಗು 2,666 ಪ್ರವಾಸಿಗರು ಮತ್ತು 1,045 ಸಿಬ್ಬಂದಿಯೊಂದಿಗೆ ಚೀನಾದ ಹಾಂಕಾಂಗ್‌ನಿಂದ ಟೋಕಿಯೋಗೆಹೊರಟಿತ್ತು.

‘ಹಡಗನ್ನು ಯೊಕೊಹಾಮದಲ್ಲಿ ಸಮುದ್ರ ಮಧ್ಯೆಯೇ ತಡೆದುನಿಲ್ಲಿಸಲಾಗಿದೆ. ಜಪಾನ್‌ ವೈದ್ಯರು ಎಲ್ಲರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸುಮಾರು 60 ಜನರಿಗೆ ಕೊರೊನಾ ವೈರಾಣು ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂದಿನ 14 ದಿನಗಳವರೆಗೆ ಯಾರನ್ನೂ ಜಪಾನ್ ಪ್ರವೇಶಿಸಲು ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಹಡಗಿನಲ್ಲಿಆಹಾರ, ಔಷಧ ಇದೆ. ಆದರೆ, ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ’ ಎಂದು ಮಗ ದೂರವಾಣಿ ಕರೆ ಮಾಡಿದ್ದಾಗ ಹೇಳಿದ್ದಾಗಿ ಅವರ ತಂದೆ ಬಾಲಕೃಷ್ಣ ಮಗರ್ ತಿಳಿಸಿದರು.

ಗೋವಾದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಅಧ್ಯಯನ ಮಾಡಿದ್ದ ಅಭಿಷೇಕ, ‘ಪ್ರಿನ್ಸೆಸ್ ಕ್ರೂಸ್‌ಲೈನ್ ಲಿಮಿಟೆಡ್‌’ನಲ್ಲಿ ಉದ್ಯೋಗ ಪಡೆದಿದ್ದರು. ಮೊದಲು ಒಂಬತ್ತು ತಿಂಗಳ ಒಪ್ಪಂದದ ಮೇರೆಗೆಕೆಲಸ ನಿರ್ವಹಿಸಿ, ಎರಡನೇ ಅವಧಿಗಾಗಿ ಮೂರು ತಿಂಗಳ ಹಿಂದೆ ತೆರಳಿದ್ದರು.

100 ಮಂದಿ ಭಾರತೀಯರು:ಪುತ್ರ ಅಭಿಷೇಕನನ್ನು ವಿದೇಶಾಂಗ ಸಚಿವಾಲಯದ ನೆರವಿನಿಂದ ಭಾರತಕ್ಕೆ ಸುರಕ್ಷಿತವಾಗಿ ಕರೆತರಬೇಕು ಎಂದು ಬಾಲಕೃಷ್ಣ ಮಗರ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಕ್ರೂಸ್‌ನಲ್ಲಿ ಅಂದಾಜು 100 ಮಂದಿ ಭಾರತೀಯರಿದ್ದಾರೆ. ಜಪಾನ್ ಸರ್ಕಾರದೊಂದಿಗೆ ಮಾತುಕತೆ ಮಾಡಿ ಸ್ವದೇಶಕ್ಕೆ ಬರಲು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT