ಭಾನುವಾರ, ಜೂಲೈ 12, 2020
29 °C
ಕೊರೊನಾ ಭಯದಿಂದ ಅಂತಿಮ ದರ್ಶನಕ್ಕೆ ಕೆಲವೇ ಜನ, ತಾಲ್ಲೂಕು ಆಡಳಿತದಿಂದ ಅಂತಿಮ ನಮನ

ಕಲಬುರ್ಗಿಯ ಸ್ವಂತ ಹೊಲದಲ್ಲಿ ಗೀತಾ ನಾಗಭೂಷಣ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರ ಅಂತ್ಯಸಂಸ್ಕಾರ, ಕಲಬುರ್ಗಿ ಹೊರವಲಯದ ಸಾವಳಗಿ ಕ್ರಾಸ್‌ನಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ 2.30ಕ್ಕೆ ನೆರವೇರಿತು.‌

ನಗರದ ಅವರ ನಿವಾಸದಲ್ಲಿ ಸೋಮವಾರ ಮಧ್ಯಾಹ್ನ 1.30 ಗಂಟೆಯವರೆಗೂ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕೊರೊನಾ ಸೋಂಕು ಭಯದಿಂದಾಗಿ ಕೆಲವೇ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಅವರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ತಹಶೀಲ್ದಾರ್‌ ಮಲ್ಲೇಶಿ ತಂಗಾ ಅವರು ತಾಲ್ಲೂಕು ಆಡಳಿತದ ಪರವಾಗಿ ಗೌರವ ಸಲ್ಲಿಸಿದರು.

ಅಂತ್ಯಸಂಸ್ಕಾರದ ವೇಳೆ ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಡಾ.ಅಜಯ ಸಿಂಗ್‌, ಬಿ.ಜಿ. ಪಾಟೀಲ, ಮಾಜಿ ಶಾಸಕರಾದ ಕೆ.ಬಿ.ಶಾಣಪ್ಪ, ತಿಪ್ಪಣ್ಣಪ್ಪ ಕಮಕನೂರ, ಹೋರಾಟಗಾರರಾದ ಮೀನಾಕ್ಷಿ ಬಾಳಿ, ಕೆ.ನೀಲಾ, ಹಿರಿಯ ಕಲಾವಿದ ವಿ.ಜಿ. ಅಂದಾನಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂ‍ಪಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು