ಸೋಮವಾರ, ಮಾರ್ಚ್ 30, 2020
19 °C
ಖಜೂರಿ ಕೋರಣೇಶ್ವರ ಶಾಖಾ ಮಠ: ಲಿಂಗದೀಕ್ಷೆ ಪಡೆದ ಮುಸ್ಲಿಂ ಯುವಕನಿಗೆ ಪಟ್ಟಾಧಿಕಾರ ಮಹೋತ್ಸವ

ಪೀಠಾಧಿಪತಿಯಾಗಿ ಪಟ್ಟಕ್ಕೇರಿದ ದಿವಾನ್ ಶರೀಫ್‌ ಮುಲ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೋಣ(ಗದಗ ಜಿಲ್ಲೆ): ಬಸವ ತತ್ವಕ್ಕೆ ಮಾರುಹೋಗಿ, ಲಿಂಗದೀಕ್ಷೆ ಪಡೆದುಕೊಂಡಿದ್ದ ತಾಲ್ಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ಯುವಕ ದಿವಾನ್ ಶರೀಫ್‌ ಮುಲ್ಲಾ  ಬುಧವಾರ ಇಲ್ಲಿ ಖಜೂರಿ ಕೋರಣೇಶ್ವರ ಶಾಖಾ ಮಠದ ಪೀಠಾಧಿಪತಿಯಾಗಿಪಟ್ಟಕ್ಕೇರಿದರು.

ಈ ಸಂದರ್ಭದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 9 ಜೋಡಿಗಳು ಹಸಮಣೆ ಏರಿದರು.

ಅಸೂಟಿ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ, ಮಠಕ್ಕೆ ಸೇರಿದ ಶಾಂತಿಧಾಮದಲ್ಲಿ  ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರಶ್ರೀಗಳು ಪಟ್ಟಾಧಿಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು.

ಇಲ್ಲಿ ಎರಡು ಎಕರೆ ಜಾಗದಲ್ಲಿ ಕೋರಣೇಶ್ವರ ಶಾಖಾ ಮಠ ‘ಶಾಂತಿಧಾಮ’ ನಿರ್ಮಾಣಗೊಳ್ಳುತ್ತಿದ್ದು, ದಿವಾನ್ ಶರೀಫ್‌ ಸ್ವಾಮೀಜಿ ಅವರು ಈ ಪೀಠದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು