ಶುಕ್ರವಾರ, ಜನವರಿ 17, 2020
22 °C

ಹಿಂದುತ್ವವಾದಿಗಳಿಗೂ ದುರಂತ ಕಾದಿದೆ: ಪ್ರೊ.ರವಿವರ್ಮ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕೇಂದ್ರದ ನೀತಿ ಹಾಗೂ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿರುವ ಹಿಂದುತ್ವವಾದಿಗಳಿಗೂ ಮುಂದಿನ ದಿನಗಳಲ್ಲಿ ದುರಂತ ಕಾದಿದೆ’ ಎಂದು ಮಾಜಿ ಅಡ್ವೊಕೇಟ್‌ ಜನರಲ್ ಪ್ರೊ. ರವಿವರ್ಮ ಕುಮಾರ್ ಎಚ್ಚರಿಸಿದರು.

ಭೀಮಾ ಕೋರೆಗಾಂವ್ 202ನೇ ವಿಜಯೋತ್ಸವದ ಅಂಗವಾಗಿ ಬುಧವಾರ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಆಡಳಿತಾರೂಢ ಕೇಂದ್ರ ಸರ್ಕಾರವು ಹಿಟ್ಲರನ ಸ್ಕ್ರಿಪ್ಟ್‌ ಅನ್ನೇ ಯಥಾವತ್ತಾಗಿ ಜಾರಿಗೊಳಿಸುತ್ತಿದೆ. ಆತನ ಆಡಳಿತದಲ್ಲಿದ್ದ ಯಹೂದಿಗಳ ಸ್ಥಾನದಲ್ಲಿ ಇದೀಗ ಮುಸಲ್ಮಾನರು ಇದ್ದಾರೆ. ನಾಜಿ ಶ್ರೇಷ್ಠತೆಯನ್ನು ಹಿಂದುತ್ವ ಆವರಿಸಿದೆ. ವಿದೇಶದಲ್ಲಿ ಬುದ್ಧನ ನಾಡಿನವ ಎನ್ನುವ ಪ್ರಧಾನಿ, ಸ್ವದೇಶದಲ್ಲಿ ಮನುವಾದಿಯ ಕೊಳಕು ಮನಸ್ಥಿತಿಯಿಂದ ಹೊರಬರುತ್ತಿಲ್ಲ. ಇದರಿಂದ ಅಪಾಯ ತಪ್ಪಿದ್ದಲ್ಲ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು