ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಗ್ರಾಮಕ್ಕೆ ನುಗ್ಗಿರುವ ಒಂಟಿ ಸಲಗ, ಜನರಲ್ಲಿ ಆತಂಕ 

Last Updated 17 ಮೇ 2019, 4:53 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನ ಜಲಾಶಯದ ಸಮೀಪ ಇರುವ ಬೀಚನಹಳ್ಳಿ ಗ್ರಾಮಕ್ಕೆ ಶುಕ್ರವಾರ ಬೆಳಿಗ್ಗೆ ಒಂಟಿ ಸಲಗವೊಂದು ನುಗ್ಗಿದೆ‌.

ಸಲಗಕ್ಕೆ ಹೆದರಿರುವ ಗ್ರಾಮಸ್ಥರು ಮನೆಯಿಂದ ಹೊರ ಬರುತ್ತಿಲ್ಲ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ಆನೆ ಓಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಬಿನಿ ಹಿನ್ನೀರಿಗೆ ಹಾಗೂ ಜಲಾಶಯದ ಸಮೀಪ ಆನೆಗಳ ಹಿಂಡು ಬಂದು ನೀರು ಕುಡಿದು ಹೋಗುತ್ತಿದ್ದವು. ಆದರೆ ಎಂದೂ ಗ್ರಾಮಕ್ಕೆ ಅಥವಾ ಜಮೀನುಗಳಿಗೆ ನುಗ್ಗಿದ ಉದಾಹರಣೆ ಇಲ್ಲ ಎಂದು ಅವರ ಹೇಳಿದ್ದಾರೆ‌.

ಬೀಚನಹಳ್ಳಿ ಮೈಸೂರಿನಿಂದ 65 ಕಿ.ಮಿ ದೂರದಲ್ಲಿದೆ. ಇಲ್ಲಿಂದ ಮುಂದೆ 10 ಕಿ.ಮೀ ಹೋದರೆ ಕೇರಳ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT