ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕೋವಿಡ್‌ಗೆ ಆರನೇ ಸಾವು, 36 ತಾಸು ಸಾವಿನ ಸುದ್ದಿ ಮುಚ್ಚಿಟ್ಟ ಸರ್ಕಾರ!

Last Updated 4 ಮೇ 2020, 9:03 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಶನಿವಾರ (ಏ.2) ಮೃತಪಟ್ಟ 56 ವರ್ಷದ ವ್ಯಕ್ತಿಯ ಸಾವಿಗೆ ಕೋವಿಡ್-19 ಕಾರಣ ಎಂದು ಜಿಲ್ಲಾಧಿಕಾರಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಪುಟಾಣಿ ಗಲ್ಲಿಯ ನಿವಾಸಿ (ಪ್ರ-587) ಇಎಸ್ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಅವರ ಗಂಟಲು ದ್ರವದ ಮಾದರಿ ಪರೀಕ್ಷಿಸಲಾಗಿತ್ತು. ಮೇ 1ರಂದು ಕೋವಿಡ್ ಪಾಸಿಟಿವ್ ದೃಢಪಟ್ಟ ಕಾರಣ ಐಸೋಲೇಷನ್ ವಾರ್ಡಿನಲ್ಲಿ ದಾಖಲಿಸಲಾಗಿತ್ತು. ಏ.2ರ ರಾತ್ರಿ ಅವರು ತೀವ್ರ ಹೃದಯಾಘಾತದ ಕಾರಣ ಮೃತಪಟ್ಟರು ಎಂದು ಜಿಲ್ಲಾಧಿಕಾರಿ ಶರತ್ ಬಿ.‌ ಖಚಿತ ಪಡಿಸಿದ್ದಾರೆ.

ವ್ಯಕ್ತಿ ಮೃತಪಟ್ಟ 36 ತಾಸಿನ ಬಳಕ ಜಿಲ್ಲಾಧಿಕಾರಿ ಈ ವಿಷಯ ಬಹಿರಂಗ ಪಡಿಸಿದ್ದಾರೆ. ಅಷ್ಟೊತ್ತಿಗೆ ಶವ ಸಂಸ್ಕಾರವೂ ಮುಗಿದು ಹೋಗಿದೆ. ವ್ಯಕ್ತಿ ಸಾವಿಗೆ ಗಂಭೀರ ಸ್ವರೂಪದ ಕಾಯಿಲೆಯೇ ಕಾರಣ. ಆದರೆ ಅವರಲ್ಲಿ ಕೋವಿಡ್ ಇದ್ದುದು ನಿಜ ಎಂದು ಇಎಸ್ಐ ಆಸ್ಪತ್ರೆ ಮೂಲಗಳು ಭಾನುವಾರ ತಿಳಿಸಿದ್ದವು.

ಮತ್ತಿಬ್ಬರಿಗೆ ಸೋಂಕು- ಚಿಂಚೋಳಿಗೂ ಹರಡಿದ ವೈರಾಣು

ಜಿಲ್ಲೆಯಲ್ಲಿ ಸೋಮವಾರ ಮತ್ತೆ ಎರಡು ಕರೊನಾ ಪಾಸಿಟಿವ್ ಪ್ರಕರಣ ಪತ್ತೆ ಆಗಿವೆ. ನಗರದ 36 ವರ್ಷದ ಮಹಿಳೆಗೆ‌ ಮತ್ತು ಚಿಂಚೋಳಿ ತಾಲ್ಲೂಕಿನ 37 ವರ್ಷದ ವ್ಯಕ್ತಿ ಗೆ ಸೋಂಕು ಇರುವುದು ದೃಢಪಟ್ಟಿದೆ.

37 ವರ್ಷದ ವ್ಯಕ್ತಿ ಚಿಂಚೋಳಿ ಪಟ್ಟಣದ ನಿವಾಸಿ. ಹೈದರಾಬಾದಿಗೆ ಪ್ರಯಾಣ ಮಾಡಿದ ಸಂದರ್ಭದಲ್ಲಿ ಸೋಂಕು ಅಂಟಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT