ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಲಸಿಕೆ ತಯಾರಿಕೆಗೆ ಸಿಎಸ್‌ಐಆರ್‌ನಲ್ಲಿ ಸಂಶೋಧನೆ

Last Updated 9 ಮಾರ್ಚ್ 2020, 21:36 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್–19’ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಹೈದರಾಬಾದ್ ಹಾಗೂ ಪುಣೆಯ ಸಂಶೋಧನಾ ಕೇಂದ್ರಗಳಲ್ಲಿ ನಡೆದಿದೆ ಎಂದು ಕೇಂದ್ರೀಯ ವೈಜ್ಞಾನಿಕ ಮತ್ತು ಔದ್ಯೋಮಿಕ ಸಂಶೋಧನಾ ಸಂಸ್ಥೆಯ (ಸಿಎಸ್‌ಐಆರ್‌) ಮಹಾನಿರ್ದೇಶಕ ಡಾ.ಶೇಖರ್ ಸಿ.ಮಾಂಡೆ ಹೇಳಿದರು.

ಲಸಿಕೆ ಸಿದ್ಧಪಡಿಸಲು ಬೇಕಾದ ರಾಸಾಯನಿಕಗಳ ಸಂಯೋಜನೆ ಕುರಿತು ಹೈದರಾಬಾದಿನ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ’ಯಲ್ಲಿ ಹಾಗೂ ಪುಣೆಯ ‘ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ’ಗಳಲ್ಲಿ ಸಂಶೋಧನೆಗಳು ಸಾಗಿವೆ. ಈ ರೀತಿಯ ಪ್ರಯತ್ನ ಜಗತ್ತಿನೆಲ್ಲೆಡೆ ನಡೆದಿದೆ. ಆದಷ್ಟು ಶೀಘ್ರ ಲಸಿಕೆ ಸಿದ್ಧವಾಗುವ ವಿಶ್ವಾಸ ಇದೆ ಎಂದು ಇಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಸದ್ಯ, ಭಾರತದಲ್ಲಿ ಯಾವುದೇ ಔಷಧಗಳ ಕೊರತೆ ಎದುರಾಗಿಲ್ಲ. ಸಂಭಾವ್ಯ ಪರಿಸ್ಥಿತಿ ಎದುರಿಸಲು ಸೂಕ್ತವಾದ ಪೂರ್ವ ತಯಾರಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT